ತಿರುಮಲದಲ್ಲಿ ರಥಸಪ್ತಮಿ: 2 ಲಕ್ಷ ಭಕ್ತರ ದಾಖಲೆಯ ಭೇಟಿ
ತಿರುಮಲ: ರಥಸಪ್ತಮಿಯ ಅಂಗವಾಗಿ ತಿರುಪತಿಯ ತಿರುಮಲ ದೇಗಲಕ್ಕೆ 2 ಲಕ್ಷಕ್ಕೂ ಹೆಚ್ಚು ದಾಖಲೆಯ ಭಕ್ತರು ಭೇಟಿ ನೀಡಿದ್ದಾರೆ.
ರಥಸಪ್ತಮಿ ಅಂಗವಾಗಿ ಸೂರ್ಯ ಜಯಂತಿ ಎಂದು ಕರೆಯಲ್ಪಡುವ ಒಂದು ದಿನದ ಬ್ರಹ್ಮೋತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗಿಯಾಗಲು ಭಕ್ತರ ದಂಡೇ ಹರಿದುಬಂದಿತ್ತು. ಇವರನ್ನು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಟ್ರಸ್ಟ್ ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಮತ್ತಿತರರು ವೀಕ್ಷಕರ ಗ್ಯಾಲರಿಗೆ ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದರು. ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರಿಗೆ ಅನ್ನಪ್ರಸಾದ, ಮಜ್ಜಿಗೆ ಮತ್ತು ನೀರನ್ನು ವಿತರಿಸಲಾಯಿತು. ಉತ್ಸವದ ಪ್ರಯುಕ್ತ ಅನ್ನಪ್ರಸಾದದಲ್ಲಿ ಉಪ್ಪಿಟ್ಟು, ಪೊಂಗಲ್, ಶ್ಯಾವಿಗೆ ಉಪ್ಪಿಟ್ಟು, ಅನ್ನ ಸಾಂಬಾರ್, ಬಿಸಿಬೇಳೆ ಬಾತ್, ಟೊಮ್ಯಾಟೊ ರೈಸ್ ನಂತರ ವಿಶೇಷ ಆಹಾರವನ್ನು ತಯಾರಿಸಲಾಗಿತ್ತು. ಸಾವಿರಾರು ಸ್ವಯಂಸೇವಕರು ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕೈಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ