ಕಪಿಲ್ ಮಿಶ್ರಾ
ದೇಶ
ಕೇಜ್ರಿವಾಲ್ ರಿಂದ ಜಿನ್ನಾ ರಾಜಕೀಯ: ಎಎಪಿಯನ್ನು ಮುಸ್ಲಿಂ ಲೀಗ್ ಎಂದು ಬದಲಿಸಲಿ: ಬಿಜೆಪಿ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಿನ್ನಾ ರಾಜಕೀಯ ಮಾಡುತ್ತಿದ್ದಾರೆ, ಹಾಗಾಗಿ ಆಮ್ಆದ್ಮಿ ಪಕ್ಷದ ಹೆಸರನ್ನು ಬದಲಾಯಿಸಲಿ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಲೇವಡಿ ಮಾಡಿದ್ದಾರೆ.
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಿನ್ನಾ ರಾಜಕೀಯ ಮಾಡುತ್ತಿದ್ದಾರೆ, ಹಾಗಾಗಿ ಆಮ್ಆದ್ಮಿ ಪಕ್ಷದ ಹೆಸರನ್ನು ಬದಲಾಯಿಸಲಿ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಲೇವಡಿ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮತಕ್ಕಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ, ಹೀಗಾಗಿ ಒಡೆದು ಆಳುವ ರಾಜಕೀಯ ಮಾಡುತ್ತಿದ್ದಾರೆ,
ಹೀಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮುಸ್ಲಿಂ ಲೀಗ್ ಎಂದು ಮರು ನಾಮಕರಣ ಮಾಡಲಿ ಎಂದು ಕಪಿಲ್ ಮಿಶ್ರಾ ಟೀಕಿಸಿದ್ದಾರೆ, ದೆಹಲಿಯಲ್ಲಿ ಬಸ್ ಗಳಿಗೆ ಬೆಂಕಿ ಹಚ್ಚುವುದು ಹಾಗೂ ಪೊಲೀಸರ ಮೇಲೆ ನಡೆಯುತ್ತಿರುವ ಹಲ್ಲೆ ಗಳ ಹಿಂದೆ ಕಾಂಗ್ರೆಸ್ ಮತ್ತು ಎಎಪಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

