ಕೇಂದ್ರವು ಅಭಿವೃದ್ಧಿಯನ್ನು ಕೇಜ್ರಿವಾಲ್ ಸರ್ಕಾರ ನೋಡಿ ಕಲಿಯಬೇಕು: ದೆಹಲಿ ಸರ್ಕಾರಕ್ಕೆ ಶಿವಸೇನೆ ಪ್ರಶಂಸೆ

ಅಭಿವೃದ್ಧಿ, ಅಭಿವೃದ್ಧಿ ಅಂತ ಬಾಯಿ ಬಡಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಆಗಿರುವ ಅಭಿವೃದ್ಧಿಯ ಮಾದರಿಯನ್ನು ಅನುಸರಿಸಬೇಕಿದೆ ಎಂದು ಶಿವಸೇನೆ ಹೇಳಿದೆ.
ಕೇಜ್ರಿವಾಲ್-ಉದ್ಧವ್ ಠಾಕ್ರೆ
ಕೇಜ್ರಿವಾಲ್-ಉದ್ಧವ್ ಠಾಕ್ರೆ

ನವದೆಹಲಿ: ಅಭಿವೃದ್ಧಿ, ಅಭಿವೃದ್ಧಿ ಅಂತ ಬಾಯಿ ಬಡಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಆಗಿರುವ ಅಭಿವೃದ್ಧಿಯ ಮಾದರಿಯನ್ನು ಅನುಸರಿಸಬೇಕಿದೆ ಎಂದು ಶಿವಸೇನೆ ಹೇಳಿದೆ.

ದೆಹಲಿ ವಿಧಾನಸಭೆ ಚುನಾವಣೆಗೆ ಒಂದು ಬಾಕಿ ಇರುವಂತೆ ಶಿವಸೇನೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಹೊಗಳಿದ್ದು, ದೆಹಲಿ ಮಾದರಿಯ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಇತರ ರಾಜ್ಯಗಳಲ್ಲೂ ಪುನಾವರ್ತಿಸಬೇಕು ಎಂದು ಹೇಳಿದೆ.

ದೆಹಲಿಯಲ್ಲಿ ಭರವಸೆಗಳನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕೇಜ್ರಿವಾಲ್ ಅವರನ್ನು ಸನ್ಮಾನಿಸಬೇಕಿತ್ತು. ಇದನ್ನು ಬಿಟ್ಟು ಬಿಜೆಪಿ ಹಿರಿಯ ಮುಖಂಡರು ಮತ್ತು ಮಂತ್ರಿಗಳು ಹಿಂದೂ-ಮುಸ್ಲಿಂ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.

ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದೆ. ದೆಹಲಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿಯ 200 ಸಂಸದರು, ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇಡೀ ಕೇಂದ್ರ ಸಚಿವ ಸಂಪುಟವೇ ಪ್ರಚಾರದಲ್ಲಿ ತೊಡಗಿವೆ. ಅದರ ಹೊರತಾಗಿಯೂ ಕೇಜ್ರಿವಾಲ್ ಅವರಿಗಿಂತ ಬಲಶಾಲಿಯಾಗಿದ್ದಾರೆ ಎಂದು ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com