ಲಖನೌ ನ್ಯಾಯಾಲಯದ ಆವರಣದಲ್ಲಿ ಸ್ಫೋಟ: ಮೂವರು ವಕೀಲರಿಗೆ ಗಾಯ

ಲಖನೌ ನ್ಯಾಯಾಲಯದ ಆವರಣದಲ್ಲಿ ಸ್ಫೋಟವೊಂದು ಸಂಭವಿಸಿದ ಪರಿಣಾಮ ಮೂವರು ವಕೀಲರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. 
ಸ್ಫೋಟ ಬಳಿಕ ಸ್ಥಳಕ್ಕೆ ಧಾವಿಸಿರುವ ನೂರಾರು ವಕೀಲರು
ಸ್ಫೋಟ ಬಳಿಕ ಸ್ಥಳಕ್ಕೆ ಧಾವಿಸಿರುವ ನೂರಾರು ವಕೀಲರು
Updated on: 

ಲಖನೌ: ಲಖನೌ ನ್ಯಾಯಾಲಯದ ಆವರಣದಲ್ಲಿ ಸ್ಫೋಟವೊಂದು ಸಂಭವಿಸಿದ ಪರಿಣಾಮ ಮೂವರು ವಕೀಲರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. 

ಲಖನೌ ಬಾರ್ ಅಸೋಸಿಯೇಷನ್'ನ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿಯವರನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 

ಉತ್ತರಪ್ರದೇಶ ವಿಧಾನಸಭಗೆ ಕೆಲವೇ ದೂರಗಳಲ್ಲಿ ಇರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಇದೀಗ ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ. 

ಘಟನೆಗೆ ಬಳಿಕ ನೂರಾರು ವಕೀಲರು ಸ್ಥಳಕ್ಕೆ ಧಾವಿಸಿದ್ದು, ಘಟನಗಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com