ಬೆಂಗಳೂರಿಗೆ ತೆರಳುತ್ತಿದ್ದ ಗೋಏರ್ ವಿಮಾನ G8 802 ನ ಇಂಜಿನ್ ಗೆ ಟೇಕ್ ಆಫ್ ವೇಳೆ ಬೆಂಕಿ!
ದೇಶ
ಬೆಂಗಳೂರಿಗೆ ತೆರಳುತ್ತಿದ್ದ ಗೋಏರ್ ವಿಮಾನ G8 802 ನ ಇಂಜಿನ್ ಗೆ ಟೇಕ್ ಆಫ್ ವೇಳೆ ಬೆಂಕಿ!
ಬೆಂಗಳೂರಿಗೆ ತೆರಳುತ್ತಿದ್ದ ಗೋಏರ್ ವಿಮಾನದ ಬಲಭಾಗದ ಇಂಜಿನ್ ನಲ್ಲಿ ಟೇಕ್ ಆಫ್ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಮುಂಬೈ: ಬೆಂಗಳೂರಿಗೆ ತೆರಳುತ್ತಿದ್ದ ಗೋಏರ್ ವಿಮಾನದ ಬಲಭಾಗದ ಇಂಜಿನ್ ನಲ್ಲಿ ಟೇಕ್ ಆಫ್ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ನಂದಿಸಲಾಗಿದೆ. ಘಟನೆ ವರದಿಯಾಗುತ್ತಿದ್ದಂತೆಯೇ ಪ್ರಯಾಣಿಕರನ್ನು, ಸಿಬ್ಬಂದಿಗಳನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಗೋಏರ್ ನ ವಕ್ತಾರರು ಹೇಳಿಕೆ ನೀಡಿದ್ದಾರೆ.
ಟೇಕ್ ಆಫ್ ವೇಳೆ ಬಾಹ್ಯ ವಸ್ತುಗಳಿಂದ ಇಂಜಿನ್ ಗೆ ಹಾನಿಯುಂಟಾಗಿರುವ ಸಾಧ್ಯತೆಗಳಿದ್ದು ಇದರಿಂದ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದ್ದು ವಿಮಾನದ ವೇಳಾಪಟ್ಟಿ ಸ್ವಲ್ಪ ವ್ಯತ್ಯಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ