ಮೆಲಾನಿಯಾ ಟ್ರಂಪ್ ಸರ್ಕಾರಿ ಶಾಲಾ ಕಾರ್ಯಕ್ರಮಕ್ಕೆ ದೆಹಲಿ ಸಿಎಂ, ಡಿಸಿಎಂಗಿಲ್ಲ ಆಹ್ವಾನ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಗೆ ದಿನಗಣನೆ ಆರಂಭವಾಗಿದ್ದು, ವಿಶ್ವದ ಪ್ರಭಾವಿ ನಾಯಕನಿಗೆ ಸ್ವಾಗತ ಕೊರಲು ಭಾರತ ಸಜ್ಜಾಗಿದೆ. ಈ ನಡುವೆ ದೆಹಲಿ ಸರ್ಕಾರಿ ಶಾಲೆಯಲ್ಲಿ ಆಯೋಜನೆಗೊಳಿಸಿರುವ ಮೆಲಾನಿಯಾ ಟ್ರಂಪ್...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಗೆ ದಿನಗಣನೆ ಆರಂಭವಾಗಿದ್ದು, ವಿಶ್ವದ ಪ್ರಭಾವಿ ನಾಯಕನಿಗೆ ಸ್ವಾಗತ ಕೊರಲು ಭಾರತ ಸಜ್ಜಾಗಿದೆ. ಈ ನಡುವೆ ದೆಹಲಿ ಸರ್ಕಾರಿ ಶಾಲೆಯಲ್ಲಿ ಆಯೋಜನೆಗೊಳಿಸಿರುವ ಮೆಲಾನಿಯಾ ಟ್ರಂಪ್ ಭೇಟಿ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ. 

ಸಾಮಾನ್ಯವಾಗಿ ದೆಹಲಿ ಸರ್ಕಾರದ ಅಡಿಯಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮಕ್ಕೆ ಆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ಇದ್ದೇ ಇರುತ್ತದೆ, ಆದರೆ, ಮೆಲಾನಿಯಾ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡದೇ ಇರುವುದಕ್ಕೆ ಆಮ್ ಆದ್ಮಿ ಪಕ್ಷ ಕಿಡಿಕಾರುತ್ತಿದೆ. 

ಕಾರ್ಯಕ್ರಮದ ಪಟ್ಟಿಯಿಂದ ಕೇಂದ್ರ ಸರ್ಕಾರವೇ ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾ ಅವರ ಹೆಸರನ್ನು ಹೊರಗಿಟ್ಟಿದೆ ಎಂದು ವರದಿಗಳು ತಿಳಿಸಿವೆ. 

ಆರಂಭದಲ್ಲಿ ದಕ್ಷಿಣ ದೆಹಲಿಯ ಶಾಲೆಗೆ ಆಗಮಿಸಲಿರುವ ಮೆಲಾನಿಯಾರ ಅವರಿಗೆ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರೇ ಸ್ವಾಗತ ಕೋರಲಿದ್ದಾರೆಂದು ಹೇಳಲಾಗುತ್ತಿತ್ತು. 

ಫೆ.25ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಂದು ಗಂಟೆಯ ಅವಧಿಯ ಭೇಟಿ ವೇಳೆ ಶಾಲಾ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್ ಸಮಯ ಕಳೆಯಲಿದ್ದಾರೆ. 

ಹ್ಯಾಪಿನೆಸ್ ಕ್ಲಾಸ್ ಎಂಬುದು ವಿದ್ಯಾರ್ಥಿಗಲಿಗಾಗಿ ದೆಹಲಿ ಸರ್ಕಾರ 2018ರ ಜುಲೈನಲ್ಲಿ ಜಾರಿಗೊಳಿಸಿದ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಡಿ ದೆಹಲಿ ಸರ್ಕಾರಿ ಶಾಲೆಗಳಲ್ಲಿ 1ರಿಂದ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು, ಈ ಹ್ಯಾಪಿ ಕ್ಲಾಸ್ ನಲ್ಲಿ ಪಾಲ್ಗೊಳ್ಲಬೇಕು. ಪ್ರತೀ ದಿನ 45 ನಿಮಿಷ ಈ ಹ್ಯಾಪಿ ಕ್ಲಾಸ್ ನಡೆಯಲಿದೆ. ಈ ತರಗತಿಯಲ್ಲಿ ವ್ಯಾಯಾಮ, ಕಥೆ ಹೇಳುವುದು. ಧ್ಯಾನ, ಪ್ರಶ್ನೆ ಮತ್ತು ಉತ್ತರ ಹಾಗೂ ಇನ್ನಿತರೆ ಶ್ರೇಯೋಭಿವೃದ್ಧಿಗೆ ಬೇಕಾದ ಚಟುವಟಿಕೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com