ದೆಹಲಿ ಹಿಂಸಾಚಾರ: 123 ಎಫ್ಐಆರ್‌ನಲ್ಲಿ ದ್ವೇಷ ಭಾಷಣ ಮಾಡಿದ ಬಿಜೆಪಿಗರ ಹೆಸರಿಲ್ಲ: ಕಾಂಗ್ರೆಸ್ ಆಕ್ರೋಶ

ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ 123 ಎಫ್ಐಆರ್‌ ಗಳಲ್ಲಿ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ಹೆಸರೇ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ 123 ಎಫ್ಐಆರ್‌ ಗಳಲ್ಲಿ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ಹೆಸರೇ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ದೆಹಲಿ ಗಲಭೆಯಲ್ಲಿ ಅಲ್ಲಿನ ಪೊಲೀಸರು 123 ಎಫ್‌ಐಆರ್ ದಾಖಲಿಸಿದ್ದಾರೆ. ವಿಪರ್ಯಾಸವೆಂದರೆ ಅವುಗಳಲ್ಲಿ ಯಾವುದೂ ಬಿಜೆಪಿಯವರ ಹೆಸರು ಒಳಗೊಂಡಿಲ್ಲ. ಪ್ರಚೋದನಕಾರಿ ಭಾಷಣ ಮಾಡಿದ ನಾಯಕರ ಹೆಸರೇ ಅದರಲ್ಲಿಲ್ಲ. ಅವರ ದ್ವೇಷದ ಭಾಷಣದಿಂದ ಗಲಭೆಗಳನ್ನು ಪ್ರಚೋದಿಸಿದ ಕೆ.ಮಿಶ್ರಾ ಮತ್ತು ಠಾಕೂರ್ ಅವರ ಹೆಸರೂ ಇಲ್ಲ. ಇದು ನಿಷ್ಪಕ್ಷಪಾತವೇ? ದೆಹಲಿ ಪೊಲೀಸರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ? ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಗುಜರಾತ್ ಮಾದರಿಯ ಆಡಳಿತದ ನೈಜ ಸತ್ಯ ಒಂದೊಂದೇ ಹೊರಬರುತ್ತಿದೆ. ಗುಜರಾತ್‌ನಲ್ಲಿ 3.8 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದು ಜುಲೈ 19 ರಿಂದ 2.41ಲಕ್ಷಕ್ಕಿಂತ ಹೆಚ್ಚಿನ ಏರಿಕೆ ಸೂಚಿಸುತ್ತದೆ. ದೇಶದಲ್ಲಿ ಆರೋಗ್ಯ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಬಿಜೆಪಿ ಹೇಳುತ್ತಿರುವ ಹೊರತಾಯಿಯೂ,ದೇಶ ಇಂತಹ ಪರಿಸ್ಥಿತಿಯಲ್ಲಿದೆ ಎಂದು ಟೀಕಿಸಿದೆ.

ನಿಮಗಿದು ತಿಳಿದಿರಲಿ, 'ಭಾರತ್ ನಿರ್ಮಾಣ ಯೋಜನೆ' ಗ್ರಾಮೀಣ ಮಟ್ಟದಲ್ಲಿ ಮೂಲ ಸೌಕರ್ಯ, ಕುಡಿಯುವ ನೀರು, ವಿದ್ಯುತ್ ಮತ್ತು ಇನ್ನಿತರೆ ಸೌಲಭ್ಯಗಳ್ನು ಕಲ್ಪಿಸಿ ಗ್ರಾಮೀಣ ಭಾರತವನ್ನು ಸದೃಢವಾಗಿ ರೂಪಿಸಲು 2005ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು 'ಭಾರತ ನಿರ್ಮಾಣ ಯೋಜನೆ'ಯನ್ನು ಜಾರಿಗೊಳಿಸಿದರು. ಇದು ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆಯಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com