ಲೋಹದ ಹಕ್ಕಿಯೊಳಗೆ ಹಾರುವ ಹಕ್ಕಿ; ಪಾರಿವಾಳ ಹಿಡಿಯಲು ವಿಮಾನ ಪ್ರಯಾಣಿಕರ ಹರಸಾಹಸ

ಅತ್ಯಂತ ಅಪರೂಪ ಎಂಬಂತೆ ವಿಮಾನದೊಳಗೆ ಎರಡು ಪಾರಿವಾಳಗಳು ಪ್ರವೇಶ ಮಾಡಿದ್ದ ಪರಿಣಾಮ ವಿಮಾನ ಹಾರಾಟ ಬರೊಬ್ಬರಿ 30 ನಿಮಿಷ ತಡವಾಗಿತ್ತು.
ವಿಮಾನದಲ್ಲಿ ಪಾರಿವಾಳ
ವಿಮಾನದಲ್ಲಿ ಪಾರಿವಾಳ

ಅಹ್ಮದಾಬಾದ್: ಅತ್ಯಂತ ಅಪರೂಪ ಎಂಬಂತೆ ವಿಮಾನದೊಳಗೆ ಎರಡು ಪಾರಿವಾಳಗಳು ಪ್ರವೇಶ ಮಾಡಿದ್ದ ಪರಿಣಾಮ ವಿಮಾನ ಹಾರಾಟ ಬರೊಬ್ಬರಿ 30 ನಿಮಿಷ ತಡವಾಗಿತ್ತು.

ಅಪರೂಪದಲ್ಲಿ ವಿಮಾನ ಹಾರಾಟದ ಅನುಭವ ಪಡೆಯಲು ಬಂದು ಜೋಡಿ ಹಕ್ಕಿಯನ್ನು ಕಂಡು ಪ್ರಯಾಣಿರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋಡಿ ಪಾರಿವಾಳಗಳನ್ನು ಕಂಡ ವಿಮಾನ ಸಿಬ್ಬಂದಿ ಕೂಡಲೇ ಅವುಗಳನ್ನು ಹೊರಗೆ ಓಡಿಸಿದ್ದಾರೆ. ಇದರಿಂದ ವಿಮಾನ ಹಾರಾಟದ ಸಮಯದಲ್ಲಿ ಅರ್ಧಗಂಟೆ ವಿಳಂಬವಾಗಿದ್ದು, ವಿಮಾನ ತಡವಾಗಿದ್ದಕ್ಕೆ ಗೋ ಏರ್ ವಿಷಾದಿಸಿದೆ. 

ಅಹಮದಾಬಾದ್ ನಿಂದ ಜೈಪುರ್'ಗೆ ಹೊರಟಿದ್ದ ಗೋ ಏರ್ ವಿಮಾನ, ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ವಿಮಾನದೊಳಗೆ ಪಾರಿವಾಳಗಳು ಬಂದಿದ್ದವು ಎನ್ನಲಾಗಿದೆ. ಪಾರಿವಾಳ ವಿಮಾನದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹಾರಾಡುತ್ತಿದ್ದು, ವಿಮಾನದ ಪ್ರಯಾಣಿಕರು ನಗುತ್ತಾ, ವೀಡಿಯೊವನ್ನು ಸೆರೆ ಹಿಡಿದರು. ಕೆಲವು ಪ್ರಯಾಣಿಕರು ಪಾರಿವಾಳವನ್ನು ಹಿಡಿಯಲು ಯತ್ನಿಸಿದ್ದು, ಕ್ಯಾಬಿನ್ ಸಿಬ್ಬಂದಿ ನೆರವು ಕೇಳಿದರು. ಆದರೆ ಪಾರಿವಾಳ ಯಾರ ಕೈಗೂ ಸಿಗಲಿಲ್ಲ. ಕೊನೆಗೂ ಪಾರಿವಾಳ ವಿಮಾನದ ಒಂದು ಬಾಗಿಲಿನಿಂದ ಹೊರಗೆ ಹಾರಿ ಹೋಯಿತು. ರಾತ್ರಿ 6:15ಕ್ಕೆ ಜೈಪುರಕ್ಕೆ ತಲುಪಬೇಕಾಗಿದ್ದ ವಿಮಾನ ಸಂಜೆ 6:45ಕ್ಕೆ ತಲುಪಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com