ದೇವಾಲಯ ನಿಧಿ ಬಳಕೆಯಲ್ಲಿ ಮಾದರಿಯಾದ ಜಾರ್ಖಂಡ್! 

ದೇವಾಲಯಕ್ಕೆ ಬರುವ ಹಣ, ನಿಧಿ ಸದ್ಬಳಕೆ ವಿಷಯದಲ್ಲಿ ಜಾರ್ಖಂಡ್ ಮಾದರಿಯಾದ ಕೆಲಸ ಮಾಡುತ್ತಿದೆ. 
ದೇವಾಲಯ ನಿಧಿ ಬಳಕೆಯಲ್ಲಿ ಮಾದರಿಯಾದ ಜಾರ್ಖಂಡ್!
ದೇವಾಲಯ ನಿಧಿ ಬಳಕೆಯಲ್ಲಿ ಮಾದರಿಯಾದ ಜಾರ್ಖಂಡ್!

ದಿಯೋಘರ್: ದೇವಾಲಯಕ್ಕೆ ಬರುವ ಹಣ, ನಿಧಿ ಸದ್ಬಳಕೆ ವಿಷಯದಲ್ಲಿ ಜಾರ್ಖಂಡ್ ಮಾದರಿಯಾದ ಕೆಲಸ ಮಾಡುತ್ತಿದೆ. 

ದಿಯೋಘರ್ ಜಿಲ್ಲಾಡಳಿತದಿಂದ ಬಾಬ ವೈದ್ಯನಾಥ್ ಕಲ್ಯಾಣ್ ಕೋಶವನ್ನು ಹೊಸ ವರ್ಷದ ಮೊದಲ ದಿನದಂದು ಸ್ಥಾಪಿಸಲಾಗಿದ್ದು, ಈ ನಿಧಿಗೆ ಬರುವ ಹಣವನ್ನು ವಿಶೇಷ ಚೇತನರು ಹಾಗೂ ಬಡವರ ನೆರವಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಪ ಆಯುಕ್ತ ನ್ಯಾನ್ಸಿ ಸಹಾಯ್ ಹೇಳಿದ್ದಾರೆ. 

’ವೈದ್ಯನಾಥ್ ಧಾಮ್’ ನ ಒಟ್ಟಾರೆ ವಾರ್ಷಿಕ ಆದಾಯದ ಶೇ.2.5 ರಷ್ಟು ಹಣವನ್ನು ಬಾಬ ವೈದ್ಯನಾಥ್ ಕಲ್ಯಾಣ್ ಕೋಶಕ್ಕೆ ನೀಡಲಾಗುತ್ತದೆ. ಪರಿಶೀಲನೆ ಬಳಿಕ ಈ ಟ್ರಸ್ಟ್ ಸಮಿತಿ ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲಿದೆ ಎಂದು ಜಿಲ್ಲಾ ಉಪ ಆಯುಕ್ತರಾದ ನ್ಯಾನ್ಸಿ ಹೇಳಿದ್ದಾರೆ. ಈ ಟ್ರಸ್ಟ್ ಗೆ ಯಾರು ಬೇಕಾದರೂ ಹಣ ಸಹಾಯ ಮಾಡಬಹುದಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com