ದೆಹಲಿಯ ಕಾರ್ಖಾನೆಯಲ್ಲಿ ಬೆಂಕಿ: 14 ಮಂದಿ ರಕ್ಷಣೆ, ಇನ್ನೂ ಸಿಕ್ಕಿ ಹಾಕಿಕೊಂಡಿರುವ ಹಲವರು 

ದೆಹಲಿಯ ಪೀರಗರ್ಹಿ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಕ್ಕಿ ಹಾಕಿಕೊಂಡ 14 ಮಂದಿಯನ್ನು ರಕ್ಷಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ಜಂಟಿ ಕಾರ್ಯ ನಡೆಸಿ ಜನರನ್ನು ರಕ್ಷಿಸುತ್ತಿದ್ದಾರೆ.
ಕಾರ್ಖಾನೆ ಮುಂದೆ ಅಗ್ನಿಶಾಮಕ ಸಿಬ್ಬಂದಿ
ಕಾರ್ಖಾನೆ ಮುಂದೆ ಅಗ್ನಿಶಾಮಕ ಸಿಬ್ಬಂದಿ

ನವದೆಹಲಿ: ದೆಹಲಿಯ ಪೀರಗರ್ಹಿ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಕ್ಕಿ ಹಾಕಿಕೊಂಡ 14 ಮಂದಿಯನ್ನು ರಕ್ಷಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ಜಂಟಿ ಕಾರ್ಯ ನಡೆಸಿ ಜನರನ್ನು ರಕ್ಷಿಸುತ್ತಿದ್ದಾರೆ.


ಸ್ಥಳದಲ್ಲಿ ಹಾಜರಿದ್ದ ದೆಹಲಿ ಅಗ್ನಿಶಾಮಕ ಸೇವೆ ನಿರ್ದೇಶಕ ಅತುಲ್ ಗಾರ್ಗ್, ಕಟ್ಟಡದೊಳಗೆ ಬೆಂಕಿ ಆರಿಸಿ ಜನರನ್ನು ಕಾಪಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದ ಐವರು ಅಗ್ನಿಶಾಮಕ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.


ಬೆಂಕಿ ಆರಿಸಲು ಹೋದಾಗ ಕಟ್ಟಡ ಹಠಾತ್ತಾಗಿ ಸ್ಫೋಟವುಂಟಾಗಿ ಅಗ್ನಿಶಾಮಕ ಸಿಬ್ಬಂದಿ ಸಿಕ್ಕಿಹಾಕಿಕೊಂಡರು. 


ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಸಂಸ್ಥೆಗೆ ಮಾತನಾಡಿ, ಆರು ಮಂದಿ ಗಾಯಗೊಂಡವರಲ್ಲಿ ನಾಗರಿಕರೊಬ್ಬರಿದ್ದು ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರಗೊಳಿಸಿದ್ದಾರೆ. ಉಳಿದ ಐವರು ಅಗ್ನಿಶಾಮಕ ಸಿಬ್ಬಂದಿ. ನಾಗರಿಕ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದಾರೆ ಎಂದರು.


ಒಕಾಯಾ ಕಂಪೆನಿಯ ಕಾರ್ಖಾನೆ ಇದಾಗಿದ್ದು ಬ್ಯಾಟರಿ ತಯಾರಿಸುವ ಘಟಕವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರಿಸ್ಥಿತಿಯ ನಿಗಾವಹಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com