ಮುಂಬೈ: ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಶಿವಸೇನೆಗೆ ಮಹಾ ಹಿನ್ನಡೆ ಉಂಟಾಗಿದೆ.
ಸಂಪುಟ ಸಚಿವ ಸ್ಥಾನಮಾನ ನೀಡದೇ ಇದ್ದ ಕಾರಣದಿಂದ ಅಸಮಾಧಾನಗೊಂಡಿರುವ ಶಿವಸೇನೆಯ ಶಾಸಕ ಅಬ್ದುಲ್ ಸತ್ತಾರ್ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅಬ್ದುಲ್ ಸತ್ತಾರ್ ಗೆ ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿತ್ತು.
ನನಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವ ಬಗ್ಗೆ ಉದ್ಧವ್ ಠಾಕ್ರೆ ಭರವಸೆ ನೀಡಿದ್ದರು. ಆದರೆ ರಾಜ್ಯ ಖಾತೆ ನೀಡಿದ್ದರು. ಅಷ್ಟೇ ಅಲ್ಲದೇ ಅಷ್ಟು ಪ್ರಮುಖವಲ್ಲದ ಖಾತೆಯನ್ನು ನೀಡುವ ಸಾಧ್ಯತೆಗಳಿತ್ತು, ಈ ಅನ್ಯಾಯ ನಾನು ಉದ್ಧವ್ ಠಾಕ್ರೆ ಸರ್ಕಾರದಿಂದ ಹೊರ ನಡೆಯುವಂತೆ ಮಾಡಿದೆ ಎಂದು ಸತ್ತಾರ್ ಹೇಳಿದ್ದಾರೆ.
ಸತ್ತಾರ್ ನ್ನು ಮನವೊಲಿಸುವ ಜವಾಬ್ದಾರಿಯನ್ನು ಶಿವಸೇನೆ ಅರ್ಜುನ್ ಕೋಥ್ಕರ್ ಅವರ ಹೆಗಲಿಗೇರಿಸಿತ್ತು. ಕಾರಣ ತಿಳಿದುಕೊಳ್ಳಲು ಖಾಸಗಿಯಾಗಿ ಸಭೆ ನಡೆಸಿದ್ದರು. ಖಾತೆ ಹಂಚಿಕೆ ಸಂಬಂಧ ನಿರ್ಧಾರ ವಿಳಂಬವಾಗುತ್ತಿರುವುದು ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ತಲೆದೋರಲು ಕಾರಣವಾಗಿದೆ. ಇತ್ತ ಎನ್ ಸಿಪಿ ಸತ್ತಾರ್ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಿದೆ.
Advertisement