ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾ ವಿಧಿವಶ

ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾಸೋಮವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು. ಆಕೆಗೆ  91 ವರ್ಷ.ವಯಸ್ಸಾಗಿತ್ತು. 
ಮಿನಾತಿ ಮಿಶ್ರಾ
ಮಿನಾತಿ ಮಿಶ್ರಾ

ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾಸೋಮವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು. ಆಕೆಗೆ  91 ವರ್ಷ.ವಯಸ್ಸಾಗಿತ್ತು.

ವಯೋಸಹಜ  ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಇತ್ತೀಚೆಗೆ ಕುಸಿದು ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರುಎಂದು ಕುಟುಂಬ ಮೂಲಗಳು ತಿಳಿಸಿವೆ. 

ಒಡಿಸ್ಸಿ ಚಳವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದ ಮಿಶ್ರಾ  70 ರ ದಶಕದ ಅಂತ್ಯದವರೆಗೂ  ಕಲಾ ಪ್ರದರ್ಶನ ನೀಡುತ್ತಿದ್ದರು. ಒಡಿಶಾದ ಸಾಂಸ್ಕೃತಿಕ ರಾಜಧಾನಿಕಟಕ್‌ನಲ್ಲಿ 1929 ರಲ್ಲಿ ಜನಿಸಿದ ಅವರು ಏಳನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸಕ್ಕೆ ಇಳಿದಿದ್ದರು. . ಓಡಿಯಾ ನೃತ್ಯ ಶೈಲಿಗಳ ಬಗ್ಗೆ ಆಳವಾದ ಸಂಶೋಧನೆಗೆ ಪ್ರವರ್ತಕನಾಗಿರುವ ಕಬಿಚಂದ್ರ ಕಾಲಿಚರಣ್ ಪಟ್ನಾಯಕ್  ಇವರ ಗುರುವಾಗಿದ್ದರು. ನಂತರ, ಅವರು 1950 ರಲ್ಲಿ ಗುರು ಕೇಲುಚರಣ್ ಮಹಾಪಾತ್ರರ ಅಡಿಯಲ್ಲಿ ತರಬೇತಿ ಪ್ರಾರಂಭಿಸಿದರು.

ಒಡಿಸ್ಸಿ ನೃತ್ಯದ ಮೂರು ಮೊದಲ ತಲೆಮಾರಿನ ಗುರುಗಳಾದ ಗುರು ಪಂಕಜ್ ಚರಣ್ ದಾಸ್, ಗುರು ದೇಬಾ ಪ್ರಸಾದ್ ದಾಸ್ ಮತ್ತು ಗುರು ಕೇಲುಚನ್ರನ್ ಮೊಹಾಪಾತ್ರರಿಂದ ಕಲಿಯುವ ಸುವರ್ಣಾವಕಾಶ ಮಿಶ್ರಾ ಪಾಲಿಗೆ ಒದಗಿತು. ಅವರು  ಮೂವರು ಒಡಿಸ್ಸಿ ಗುರುಗಳ ವಿಶೇಷ ತಂತ್ರಗಳನ್ನು ತಮ್ಮ ನೃತ್ಯದಲ್ಲಿ ಸೇರಿಸಿಕೊಂಡರು. .

ವಿದ್ಯಾಭ್ಯಾಸ ಮುಗಿದ ನಂತರ, ಮದ್ರಾಸ್‌ನ ರುಕ್ಮಿಣಿ ದೇವಿ ಅರುಂಡೇಲ್ ಅವರ ಕಲಾಕ್ಷೇತ್ರಕ್ಕೆ ಹೋಗಲು ಒಡಿಶಾ ಸರ್ಕಾರದ ವಿಶೇಷ ವಿದ್ಯಾರ್ಥಿವೇತನವನ್ನು ಪಡೆದರು, ಅಲ್ಲಿ ಅವರು ಗುರು ಚೋಕಲಿಂಗಂ ಪಿಳ್ಳೈಯಿಂದ ಭರತನಾಟ್ಯವನ್ನು ಕಲಿತರು.

ಒಡಿಸ್ಸಿ ಸಂಗೀತ ಮತ್ತು ನೃತ್ಯವನ್ನು ಶೈಕ್ಷಣಿಕ ರೂಪ ನೀಡುವಲ್ಲಿ ಮಿಶ್ರಾ ಪ್ರಮುಖ ಪಾತ್ರ ವಹಿಸಿದ್ದರು. ಒಡಿಶಾದ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರವು 1964 ರಲ್ಲಿ ಭುವನೇಶ್ವರ ಮೂಲದ ಉತ್ಕಲ್ ಸಂಗೀತ ಮಹಾವಿದ್ಯಾಲಯವನ್ನು ಸ್ಥಾಪಿಸಿದಾಗ, ಅವರು 1966 ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಅವರು 25 ವರ್ಷಗಳ ಕಾಲ (1966 ರಿಂದ 1991 ರವರೆಗೆ) ಈ ಹುದ್ದೆಯನ್ನು ನಿರ್ವಹಿಸಿದರು ಈ ಅವಧಿಯಲ್ಲಿ ಅವರು ಒಡಿಸ್ಸಿ ನೃತ್ಯ ಮತ್ತು ಸಂಗೀತ ವಿಷಯಗಳಲ್ಲಿ ವಿಶೇಷ ಪಠ್ಯಕ್ರಮವನ್ನು ರಚಿಸಿದ್ದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ, ಒಡಿಸ್ಸಿಯ ಸೈದ್ಧಾಂತಿಕ ಅಂಶಗಳನ್ನು ತನ್ನ ಶಾಲೆ'ಕಳಿಂಗ ಕಲಾ ತೀರ್ಥ' ಮೂಲಕ ಕಲಿಸಿದ್ದರು.

ನರ್ತಕಿಯಾಗಿರುವುದರ ಹೊರತಾಗಿ, ಮಿಶ್ರಾ ನಟನೆಯಲ್ಲಿಯೂ ಪ್ರಾವೀಣ್ಯತೆ ಮೆರೆದಿದ್ದರು.  ನಾಲ್ಕು ಒಡಿಯಾ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.  '

ನೃತ್ಯ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಕ್ರಮವಾಗಿ 2000 ಮತ್ತು 1975 ರಲ್ಲಿ ಪ್ರತಿಷ್ಠಿತ ಕೇಂದ್ರ ಮತ್ತು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದ ಮಿಶ್ರಾ ಅವರಿಗೆ  2012 ರಲ್ಲಿ ಪದ್ಮಶ್ರೀ  ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಮಿಶ್ರಾ ಅವರ ನಿಧನಕ್ಕೆ ಒಡಿಸ್ಸಿ ಕಲಾವಿದರು ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com