ಕೇಂದ್ರ ಸರ್ಕಾರ, ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅಸ್ತು
ನವದೆಹಲಿ: ಆರೋಗ್ಯ ವಲಯದಲ್ಲಿ ಸಹಕಾರಕ್ಕಾಗಿ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಮತ್ತು ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ 2019ರ ನವೆಂಬರ್ ನಲ್ಲಿ ಮಾಡಿಕೊಳ್ಳಲಾದ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನದ ಟ್ರಸ್ಟೀ ಹಾಗೂ ಉಪ ಅಧ್ಯಕ್ಷರಾದ ಬಿಲ್ ಗೇಟ್ಸ್ ಅವರು ಕಳೆದ ನವೆಂಬರ್ ನಲ್ಲಿ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಗರ್ಭಿಣಿಯರ ಆರೋಗ್ಯ ವೃದ್ಧಿಸುವುದು ಹಾಗೂ ಪ್ರಾಥಮಿಕ ಆರೋಗ್ಯ ವಲಯದಲ್ಲಿ ಲಸಿಕೆ ಮತ್ತು ಪೌಷ್ಠಿಕಾಂಶಗಳನ್ನು ಸುಧಾರಣೆ ಸೇರಿದಂತೆ ಆರೋಗ್ಯ ಸೇವೆಗಳನ್ನು ಒದಗಿಸುವ ಕುರಿತ ಒಡಂಬಡಿಕೆಯಲ್ಲಿ ಸಹಿ ಹಾಕಲಾಗಿದೆ.
ಸಚಿವ ಸಂಪುಟ ನಂತರ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಕುಟುಂಬ ಕಲ್ಯಾಣಕ್ಕೆ ಗುಣಮಟ್ಟದ ವಿಧಾನಗಳು, ಸಾಂಕ್ರಾಮಿಕ ರೋಗಗಳಿಂದ ಜನರ ಮೇಲೆ ಹೊರೆ ಕಡಿಮೆ ಮಾಡುವುದು, ಡಿಜಿಟಲ್ ಆರೋಗ್ಯಕ್ಕೆ ನೀಡುವುದು ಒಡಬಂಡಿಕೆಯಲ್ಲಿ ಸೇರಿವೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ