ಭೀಕರ ರಸ್ತೆ ಅಪಘಾತ: ಖಾಸಗಿ ಬಸ್ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ, 8 ಮಂದಿ ದುರ್ಮರಣ

ರಾಜಸ್ಥಾನದ ಚುರು ಸಮೀಪ ರಾಷ್ಟ್ರೀಯ ಹೆದ್ದಾರಿ 11ರಲ್ಲಿ ವ್ಯಾನ್ ಮತ್ತು ಬಸ್‍ವೊಂದರ ನಡುವೆ ಢಿಕ್ಕಿಯಾಗಿ ಕನಿಷ್ಟ ಎಂಟು ಜನರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಅಪಘಾತದ ಚಿತ್ರ
ಅಪಘಾತದ ಚಿತ್ರ
Updated on

ಶ್ರೀಗಂಗಾನಗರ: ರಾಜಸ್ಥಾನದ ಚುರು ಸಮೀಪ ರಾಷ್ಟ್ರೀಯ ಹೆದ್ದಾರಿ 11ರಲ್ಲಿ ವ್ಯಾನ್ ಮತ್ತು ಬಸ್‍ವೊಂದರ ನಡುವೆ ಢಿಕ್ಕಿಯಾಗಿ ಕನಿಷ್ಟ ಎಂಟು ಜನರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
 
ಪರಸನಿಯು ಸಮೀಪ ಬೆಳಿಗ್ಗೆ 8.40ಕ್ಕೆ ಎರಡೂ ವಾಹನಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
 
ಗಾಯಾಳುಗಳನ್ನು ರಾಜಲ್‍ದೆಸರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ. ನತದೃಷ್ಟರೆಲ್ಲರೂ ಬಿಕನೇರ್ ನ ನಿವಾಸಿಗಳೆನ್ನಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ ಎಂದು ರಾಜಲ್‍ದೆಸರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುರೇಂದ್ರ ರಾಣಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com