ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಬ್ಬು ನಾರುತ್ತಿರುವ ಪತಿಯಿಂದ ನನಗೆ ವಿಚ್ಚೇದನ ಕೊಡಿಸಿ ಎಂದ ಪತ್ನಿ!

ತನ್ನ ಪತಿ ಪ್ರತಿನಿತ್ಯ ಸ್ನಾನ, ಕ್ಷೌರಗಳನ್ನು ಮಾಡಿಕೊಳ್ಳುವುದಿಲ್ಲ, ಹಲ್ಲುಜ್ಜುವುದಿಲ್ಲ  ಹೀಗಾಗಿ ಅವನ ದೇಹ ದುರ್ವಾಸನೆಯಿಂದ ಗಬ್ಬು ನಾರುತ್ತಿದೆ, ನನಗೆ ಅವನೊಡನೆ ಬಾಳಲು ಸಾಧ್ಯವಿಲ್ಲ ಎಂದು ಮಹಿಳೆಯೊಬ್ಬರು ಗಂಡನಿಂದ ವಿಚ್ಚೇದನ ಬಯಸಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ
Published on

ಪಾಟ್ನಾ: ತನ್ನ ಪತಿ ಪ್ರತಿನಿತ್ಯ ಸ್ನಾನ, ಕ್ಷೌರಗಳನ್ನು ಮಾಡಿಕೊಳ್ಳುವುದಿಲ್ಲ, ಹಲ್ಲುಜ್ಜುವುದಿಲ್ಲ  ಹೀಗಾಗಿ ಅವನ ದೇಹ ದುರ್ವಾಸನೆಯಿಂದ ಗಬ್ಬು ನಾರುತ್ತಿದೆ, ನನಗೆ ಅವನೊಡನೆ ಬಾಳಲು ಸಾಧ್ಯವಿಲ್ಲ ಎಂದು ಮಹಿಳೆಯೊಬ್ಬರು ಗಂಡನಿಂದ ವಿಚ್ಚೇದನ ಬಯಸಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಪತಿ ದುರ್ವಾಸನೆ ಬೀರುತ್ತಾನೆ ಮತ್ತು ಶಿಷ್ಟಾಚಾರ ಮತ್ತು ನಡತೆಯನ್ನು ಅನುಸರಿಸುವುದಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಇದೀಗ ರಾಜ್ಯ ಮಹಿಳಾ ಆಯೋಗವು (ಎಸ್‌ಡಬ್ಲ್ಯುಸಿ) ಆ ಮಹಿಳೆಯ ಪತಿಗೆ ಮಹಿಳೆಯ ದೂರಿನ ಕುರಿತು ಹೇಳಿದ್ದು ದೂರುಗಳ ಬಗ್ಗೆ ಎರಡು ತಿಂಗಳಲ್ಲಿ ಪರಿಹಾರ ಒದಗಿಸುವಂತೆ ಆದೇಶಿಸಿದೆ.ಒಂದು ವೇಳೆ ಹಾಗೆ ಮಾಡದಿದ್ದಲ್ಲಿ ಆಯೋಗವು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದೂ ಎಚ್ಚರಿಸಿದೆ.
 
ವೈಶಾಲಿ ಜಿಲ್ಲೆಯ ನಯಗೌನ ಗ್ರಾಮದ ದೆಸ್ರಿ ಬ್ಲಾಕ್ ನಿವಾಸಿ ಸೋನಿ ದೇವಿ(20)  2017 ರಲ್ಲಿ ಪ್ಲಂಬರ್ ಆಗಿದ್ದ ಮನೀಶ್(23) ಎನ್ನುವವನನ್ನು ವಿವಾಹವಾಗಿದ್ದರು.  “ನನ್ನ ಪತಿ ಸುಮಾರು 10 ದಿನಗಳವರೆಗೆ ಕ್ಷೌರ ಮತ್ತು ಸ್ನಾನ ಮಾಡದ ಕಾರಣ ದುರ್ವಾಸನೆ ಬೀರುತ್ತಾನೆ. ಇದಲ್ಲದೆ, ಅವನು ಹಲ್ಲುಜ್ಜುವುದಿಲ್ಲ. ಅವನಿಗೆ ಶುಚಿತ್ವದ ಬಗ್ಗೆ ತಿಳುವಳಿಕೆ ಇಲ್ಲ. ಶಿಷ್ಟಾಚಾರಗಳನ್ನು ಅನುಸರಿಸುವುದಿಲ್ಲ ”ಎಂದು ಮಹಿಳೆ ಆರೋಪಿಸಿದ್ದಾರೆ.

ಆದರೆ ಮಹಿಳೆಯ ವಿಚ್ಚೇದನ ಅರ್ಜಿ, ಅದರಲ್ಲಿ ಆಕೆ ಕೊಟ್ಟ ಕಾರಣ ಕಂಡು  ಎಸ್‌ಡಬ್ಲ್ಯುಸಿ ಅಧಿಕಾರಿ ಅಚ್ಚರಿಗೆ ಒಳಗಾಗಿದ್ದಾರೆ. "ವಿಚ್ಚೇದನಕ್ಕಾಗಿ ಉಲ್ಲೇಖಿಸಿರುವ ಅವರ  ಕ್ಷುಲ್ಲಕ ಕಾರಣಗಳನ್ನು ಕಂಡು ನಾನು ಆಘಾತಕ್ಕೊಳಗಾಗಿದ್ದೇನೆ” ಎಂದು ಎಸ್‌ಡಬ್ಲ್ಯುಸಿ ಸದಸ್ಯೆ ಪ್ರತಿಮಾ ಸಿನ್ಹಾ ಹೇಳೀದ್ದಾರೆ.

 “ನಾನು ಇನ್ನು ಮುಂದೆ ನನ್ನ ಗಂಡನೊಂದಿಗೆ ವಾಸಿಸಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ಈ ಮನುಷ್ಯನಿಂದ ಬಿಡುಗಡೆಗೊಳಿಸಿ, ಆತ ತನ್ನ ಜೀವನವನ್ನು ಹಾಳು ಮಾಡಿದ್ದಾನೆ" ಎಂದು ಮಹಿಳೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಳು. ಆದರೆ ಪತಿ ಮನೀಶ್  ಮಾತ್ರ ತಾನು ಆಕೆಯೊಡನೆ ವಾಸಿಸಲು ಬಯಸುತ್ತೇನೆ. ಮತ್ತು ತನ್ನ ನಡವಳಿಕೆಯನ್ನು ತಿದ್ದಿಕೊಳ್ಳುತ್ತೇನೆ ಎಂದು  ಹೇಳಿದ್ದಾನೆ.

 ದಂಪತಿಗಳು ತಮ್ಮ ಮದುವೆಯನ್ನು ಕೊನೆಗೊಳಿಸದಂತೆ ಮನವೊಲಿಸಲು ಪ್ರಯತ್ನಿದ ನ್ಯಾಯಾಲಯ ಪತಿಯು ತನ್ನನ್ನು ತಿದ್ದಿಕೊಳ್ಳಲು ಆತನಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ.

ಇನ್ನು ಮದುವೆಯಲ್ಲಿ ನೀಡಿದ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತನ್ನ ತಂದೆಗೆ ಹಿಂದಿರುಗಿಸುವಂತೆ ಮಹಿಳೆ ತನ್ನ ಗಂಡನನ್ನು ಕೇಳಿಕೊಂಡಳು. ಪತಿ-ಪತ್ನಿಯರ ಸಂಬಂಧ ಸೌಹಾರ್ದಯುತವಾಗಿಲ್ಲ ಎಂದ ಆಕೆ ನಮಗೆ ಮಕ್ಕಳಾಗಿಲ್ಲ, ಮದುವೆಯೊಂದು ‘ನಿಷ್ಪ್ರಯೋಜಕ’.ಕಾರ್ಯಕ್ರಮ ಎಂದಿದ್ದಾರೆ.

ಈ ವಿಷಯವನ್ನು ಇತ್ಯರ್ಥಪಡಿಸುವುದು ಆಯೋಗದ ಮೊದಲ ಆದ್ಯತೆಯಾಗಿದೆ ಎಂದು ಪ್ರತಿಮಾ ಹೇಳಿದರು. “ಕನಿಷ್ಠ ನಾವು ಅತ್ತೆಯನ್ನು ಅನುಸರಿಸುವ ಮೂಲಕ ಮಹಿಳೆಗೆ ಸಹಾಯ ಮಾಡಬಹುದು’ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಲು. ಅಂತಿಮ ಪ್ರತ್ಯೇಕತೆಗಾಗಿ ಅವಳು ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಿರುವುದು ನಿಜ. ನಾವು ಅವಳೊಂದಿಗೆ ಸಹಕರಿಸುತ್ತೇವೆ. ” ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com