ಯುಪಿ ಕೋಟ್ಯಾಧಿಪತಿ ಮಗ, ಹರಿಯಾಣದಲ್ಲಿ ಭಿಕ್ಷುಕ, 2 ವರ್ಷದ ಬಳಿಕ ಮನೆ ಸೇರಿದ ರೋಚಕ ಕಥೆ!

ಉತ್ತರ ಪ್ರದೇಶದ ಕೋಟ್ಯಾಧಿಪತಿ ಮಗನೊಬ್ಬ ಮನೆಯನ್ನು ಬಿಟ್ಟು ಹರಿಯಾಣದ ಅಂಬಾಲದ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಅಂತೂ ಎರಡು ವರ್ಷಗಳ ಬಳಿಕ ಆತ ಮನೆ ಸೇರಿದ್ದಾನೆ. 
ಭಿಕ್ಷುಕ
ಭಿಕ್ಷುಕ

ಉತ್ತರ ಪ್ರದೇಶದ ಕೋಟ್ಯಾಧಿಪತಿ ಮಗನೊಬ್ಬ ಮನೆಯನ್ನು ಬಿಟ್ಟು ಹರಿಯಾಣದ ಅಂಬಾಲದ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಅಂತೂ ಎರಡು ವರ್ಷಗಳ ಬಳಿಕ ಆತ ಮನೆ ಸೇರಿದ್ದಾನೆ. 

ಉತ್ತರ ಪ್ರದೇಶದ ಅಜಾಮ್‌ಗರ್ ಮೂಲದ ಧನಂಜಯ್ ಠಾಕೂರ್ ಎರಡು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ. ಬಳಿಕ ಉತ್ತರಪ್ರದೇಶದ ಅಂಬಾಲಕ್ಕೆ ಬಂದ ಧನಂಜಯ್ ಅನೂಜ್ ಮಂಡಿ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ. 

ಕಳೆದ ಶುಕ್ರವಾರ ಸಾಹಿಲ್ ಎಂಬಾತ ಅನೂಜ್ ಮಂಡಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ಧನಂಜಯ್ ನನ್ನು ನೋಡಿದ್ದಾರೆ. ಧನಂಜಯ್ ಕಾಲಿಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಮೊದಲಿಗೆ ಪ್ರಥಮ ಚಿಕಿತ್ಸೆ ಮಾಡಿ ಸಾಹಿಲ್ ನಂತರ ಆತನ ಪೂರ್ವಪರವನ್ನು ವಿಚಾರಿಸಿದ್ದಾನೆ. 

ಧನಂಜಯ್ ಮನೋರೋಗಿಯಂತೆ ಕಾಣುತ್ತಿದ್ದು ಆತನಿಂದ ಯಾವುದೇ ರೀತಿಯ ಸೂಕ್ತ ಮಾಹಿತಿ ಸಿಗುವುದಿಲ್ಲ. ನಂತರ ಕೆಲ ನಿಮಿಷ ಯೋಚಿಸಿದ ಧನಂಜಯ್ ಕುಟುಂಬದ ಒಬ್ಬರ ಮೊಬೈಲ್ ಸಂಖ್ಯೆಯನ್ನು ತಿಳಿಸಿದ್ದ. ಕೂಡಲೇ ಸಾಹಿಲ್ ಈ ನಂಬರ್ ಗೆ ಕರೆ ಮಾಡಿದಾಗ ಧನಂಜಯ್ ಸಂಬಂಧಿಕರೊಬ್ಬರು ಮಾತನಾಡಿದರು. ವಿಷಯ ತಿಳದ ಕೂಡಲೇ ಧನಂಜಯ್ ಸಹೋದರಿಯೊಬ್ಬರು ಅಂದೇ ಅನೂಜ್ ಮಂಡಿಗೆ ತೆರಳಿ ಸಹೋದರನ್ನು ಗುರುತಿಸಿ ಆತನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com