ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಪಾಕ್ ವಿರುದ್ಧ ಕಿಡಿಕಾರಿದ ರಾವತ್

ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟು,ಪ್ರಾಯೋಜಿಸುವ ದೇಶಗಳನ್ನು ರಾಜತಾಂತ್ರಿಕವಾಗಿ ದೂರವಿಡಬೇಕು ಎಂದು ಪಾಕ್ ವಿರುದ್ಧ ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗುರುವಾರ ವಾಗ್ದಾಳಿ ಮಾಡಿದ್ದಾರೆ. 
ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್
ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್
Updated on

ನವದೆಹಲಿ: ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟು,ಪ್ರಾಯೋಜಿಸುವ ದೇಶಗಳನ್ನು ರಾಜತಾಂತ್ರಿಕವಾಗಿ ದೂರವಿಡಬೇಕು ಎಂದು ಪಾಕ್ ವಿರುದ್ಧ  ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗುರುವಾರ ವಾಗ್ದಾಳಿ ಮಾಡಿದ್ದಾರೆ. 

9/11 ದಾಳಿಯ ನಂತರದ ಭಯೋತ್ಪಾದಕ ಗುಂಪುಗಳ ಮೇಲೆ ಅಮೆರಿಕ  ತೆಗೆದುಕೊಂಡ ರೀತಿಯಲ್ಲಿ ಅವರು ಕಠಿಣ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದರು. 

ರೈಸಿನಾ ಡೈಲಾಗ್ 2020 ರಲ್ಲಿ ಮಾತನಾಡಿದ ಜನರಲ್ ರಾವತ್, '' ಭಯೋತ್ಪಾದನೆ ವಿರುದ್ಧ ಜಾಗತಿಕವಾಗಿ  ಮಾತನಾಡುವುದು  ಮತ್ತೊಂದೆಡೆ   ಭಯೋತ್ಪಾದನೆ ಪ್ರಾಯೋಜಿಸುವ ರೀತಿಯ  ನಿಲುವು ಹೊಂದಲು ಸಾಧ್ಯವಿಲ್ಲ  ಎಂದರು.

ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಸಮುದಾಯ  ದೂರವಿಡಬೇಕು ಎಂದು ಅವರು ಒತ್ತಿ ಹೇಳಿದರು.

ಸಾಂಪ್ರದಾಯಿಕ ಯುದ್ಧದಂತೆಯೇ ಭಯೋತ್ಪಾದನೆಯ ಭವಿಷ್ಯ ಕೊಳಕಿನಿಂದ ಕೂಡಿದೆ.  . ಸುಖಾಂತ್ಯವಿದೆ ಎಂದು ನಾವು ಭಾವಿಸಬಹುದು, ಆದರೆ ಇರುವುದಿಲ್ಲ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ಯುದ್ಧ ಕೊನೆಯಾಗಲಿದೆ  ಎಂದು ನಾವು ಭಾವಿಸುವುದೇ ತಪ್ಪು  ಎಂದು ಅವರು ಹೇಳಿದರು.

ಭಯೋತ್ಪಾದನೆಗೆ ಕುಮ್ಮಕ್ಕು, ಪ್ರಾಯೋಜಕತ್ವ ನೀಡುವ ತನಕ  ಭಯೋತ್ಪಾದನೆ ಇರುತ್ತದೆ. ನಾವು ಬುಲ್ ಅನ್ನು  ಕೊಂಬಿನಿಂದ ತೆಗೆದು ಮೂಲ ಕಾರಣಕ್ಕೆ ಹೊಡೆಯಬೇಕು  ಎಂದರು. 

9/11 ದಾಳಿಯ ನಂತರದ ಭಯೋತ್ಪಾದಕ ಗುಂಪುಗಳ ಮೇಲೆ ಅಮೆರಿಕ  ತೆಗೆದುಕೊಂಡ ರೀತಿಯಲ್ಲಿಯೂ ಅವರು ಕಠಿಣ ಮಾರ್ಗವನ್ನು ಅನುಸರಿಸಿದರು.

ಭಯೋತ್ಪಾದನೆಯನ್ನು ಕೊನೆಗೊಳಿಸಬೇಕಾದರೆ  ಅದು 9/11 ರ ನಂತರ ಅಮೆರಿಕ ತೆಗೆದುಕೊಂಡ ಕ್ರಮದ ರೀತಿಯಲ್ಲೇ  ಸಾಗಬೇಕಾಗಬಹದು ಎಂದರು. 

ಮೂಲಭೂತವಾದವನ್ನು  ನಾವು ಮೊಳಕೆಯಲ್ಲೆ ಚಿವುಟಿ ಹಾಕಬೇಕು ಏಕೆಂದರೆ ಇಲ್ಲದೆ ಹೋದರೆ  ಶಾಲೆಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಸ್ಥಳಗಳಿಂದ ಪ್ರಾರಂಭವಾಗಿಬಿಡುತ್ತದೆ. ಕಾಶ್ಮೀರದಲ್ಲಿ, 10-12 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಲ್ಲೂ ಮೂಲಭೂತ ವಾದವಿದೆ  ಈ ಚಿಕ್ಕ ಮಕ್ಕಳನ್ನು ಮೂಲಭೂತವಾದಿಂದ   ಪ್ರತ್ಯೇಕಿಸಬೇಕು ಎಂದರು. 

ತಾಲಿಬಾನ್ ಜೊತೆಗಿನ ಮಾತುಕತೆಗಳನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಜನರಲ್ ರಾವತ್ ಅವರು "ಭಯೋತ್ಪಾದನೆಯ ಆಯುಧ   ಬಿಟ್ಟುಕೊಟ್ಟರೆ ಎಲ್ಲರೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಬಹದು  ಹೇಳಿದರು.

 ತಾಲಿಬಾನ್ ಅಥವಾ ಯಾವುದೇ ಸಂಘಟನೆಯು ಭಯೋತ್ಪಾದನೆಯನ್ನು ಆಲೋಚಿಸುತ್ತಿದೆ ಎಂದರೆ ಆ ಭಯೋತ್ಪಾದನೆಯ ಆಯುಧವನ್ನು ಮೊದಲು ತ್ಯಜಿಸಿ, ರಾಜಕೀಯ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಹೇಳಿದರು.

ಸಿಡಿಎಸ್ ರಚನೆಯ ಬಗ್ಗೆ ಕೇಳಿದ್ದಕ್ಕೆ  "ಸಿಡಿಎಸ್ ಸಮಾನರಲ್ಲಿ ಮೊದಲನೆಯದು ಆದರೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಜವಾಬ್ದಾರಿಗಳನ್ನು  ಪಡೆಯಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com