ನೂತನ ಸಂಸತ್ ಭವನದಲ್ಲಿ 1,350 ಸದಸ್ಯರಿಗೆ ಆಸನದ ವ್ಯವಸ್ಥೆ ಇರುವ ಸಾಧ್ಯತೆ 

ಜಂಟಿ ಸಂಸತ್ ಅಧಿವೇಶನದ ಪ್ರಮುಖ ಕೇಂದ್ರವಾಗಲಿರುವ ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ 1350 ಸದಸ್ಯರಿಗೆ ಆಸನದ ವ್ಯವಸ್ಥೆ ಹೊಂದುವಂತೆ ಸೆಂಟ್ರಲ್ ವಿಸ್ತಾ ಪುನರ್ ನವೀಕರಣ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆ 2024ರೊಳಗೆ ಮುಕ್ತಾಯಗೊಳ್ಳಲಿದೆ.
ಸಂಸತ್ ಭವನ
ಸಂಸತ್ ಭವನ
Updated on

ನವದೆಹಲಿ: ಜಂಟಿ ಸಂಸತ್ ಅಧಿವೇಶನದ ಪ್ರಮುಖ ಕೇಂದ್ರವಾಗಲಿರುವ ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ 1350 ಸದಸ್ಯರಿಗೆ ಆಸನದ ವ್ಯವಸ್ಥೆ ಹೊಂದುವಂತೆ ಸೆಂಟ್ರಲ್ ವಿಸ್ತಾ ಪುನರ್ ನವೀಕರಣ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆ 2024ರೊಳಗೆ ಮುಕ್ತಾಯಗೊಳ್ಳಲಿದೆ.

ನೂತನ ಸಂಸತ್ ಸಂಕೀರ್ಣ ನಿರ್ಮಾಣದ ಯೋಜನೆಯನ್ನು 2022ರೊಳಗೆ ಮುಕ್ತಾಯಗೊಳಿಸಲು ಈ ಹಿಂದೆ ಯೋಜನೆ ಹಾಕಿಕೊಳ್ಳಲಾಗಿತ್ತು. ಮೊದಲ ಹಂತದ ಯೋಜನೆ ಆಂತಿಮಗೊಂಡಿದ್ದು, ಟೆಂಡರ್ ಕರೆಯಲಾಗಿದೆ. 

ಪ್ರಸ್ತುತದಲ್ಲಿನ ವಿನ್ಯಾಸದಂತೆ  ವಿದ್ಯುತ್ ದೀಪಾಲಂಕೃತ  ಭವ್ಯ ಕಟ್ಟಡ ಗಳನ್ನು ಹೊಂದಿರುವ ತ್ರಿಕೋನ  ರೀತಿಯ ಹೊಸ ಸಂಸತ್  ಸಂಕೀರ್ಣ ನಿರ್ಮಿಸಲಾಗುತ್ತಿದೆ. ಸಂಸದರು ಆರಾಮವಾಗಿ ಕುಳಿತುಕೊಳ್ಳಲು ಅವಕಾಶವಾಗುವಂತೆ  ಎರಡು ಆಸನದ ಬೆಂಚುಗಳನ್ನು ಒದಗಿಸಲಾಗುವುದು, ಜಂಟಿ ಆಧಿವೇಶನ ಸಂದರ್ಭದಲ್ಲಿ ಮೂವರಿಗೂ ಅವಕಾಶವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. 

ಪುನರ್ ನವೀಕರಣ ಯೋಜನೆಯಂತೆ ರಾಜಪಥವನ್ನು ಮರು ವಿನ್ಯಾಸಗೊಳಿಸಲಾಗುವುದು, ಸೆಂಟ್ರಲ್ ಸೆಕ್ರೆಟರಿಯೇಟ್  ರೂಪಿಸಲಾಗುತ್ತಿದೆ. ನಾರ್ಥ್ ಬ್ಲಾಕ್ , ಸೌಥ್ ಬ್ಲಾಕ್  ಮ್ಯೂಸಿಯಂ ಆಗಲಿವೆ.

ಅಹಮದಾಬಾದ್ ಮೂಲದ ಎಚ್‌ಸಿಪಿ ವಿನ್ಯಾಸದಂತೆ  ಹೊಸ ತ್ರಿಕೋನ ಸಂಸತ್ತು ಕಟ್ಟಡವು ಅಸ್ತಿತ್ವದಲ್ಲಿರುವ ಸಂಕೀರ್ಣದ ಪಕ್ಕದಲ್ಲಿ ಬರಲಿದೆ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವನ್ನು  ಕೆಲವು ಹೊಸ ಸರ್ಕಾರಿ ಕಟ್ಟಡಗಳನ್ನು ಹೊಂದಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ

 ಪ್ರಧಾನ ಮಂತ್ರಿಗಳ ನಿವಾಸವನ್ನು ಈಗಿರುವ ಸೌತ್ ಬ್ಲಾಕ್ ಸಂಕೀರ್ಣದ ಹಿಂದೆ ಸ್ಥಳಾಂತರಿಸಲಾಗುವುದು ಮತ್ತು ಉಪ ರಾಷ್ಟ್ರಪತಿಗಳ ನಿವಾಸ ನಾರ್ಥ್ ಬ್ಲಾಕ್ ಹಿಂದಕ್ಕೆ ಸ್ಥಳಾಂತರವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com