ದೆಹಲಿ ಚುನಾವಣೆ: ಎಎಪಿಯ ಅಭ್ಯರ್ಥಿ ಆಸ್ತಿ 292 ಕೋಟಿ ರೂಪಾಯಿ!

ಮುಡ್ಕ ಕ್ಷೇತ್ರದ ಎಎಪಿ ಅಭ್ಯರ್ಥಿ ಧರಮ್ಮಪಾಲ್ ಲರ್ಕಾ ಅವರು 292 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದು, ಇದುವರೆಗಿನ ದೆಹಲಿ ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಧರಮ್ಮಪಾಲ್ ಲರ್ಕಾ
ಧರಮ್ಮಪಾಲ್ ಲರ್ಕಾ
Updated on

ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣಾ ಆಖಾಡದಲ್ಲಿ ಕಳೆದ ಭಾರಿಗಿಂತಲೂ ಹೆಚ್ಚಿನ ಕೋಟ್ಯಾಧಿಪತಿಗಳು ಇದ್ದಾರೆ.

ಮುಡ್ಕ ಕ್ಷೇತ್ರದ ಎಎಪಿ ಅಭ್ಯರ್ಥಿ ಧರಮ್ಮಪಾಲ್ ಲರ್ಕಾ ಅವರು 292 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದು, ಇದುವರೆಗಿನ ದೆಹಲಿ ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಎಎಪಿಯ ಬಾದರ್ಪುರ್ ಅಭ್ಯರ್ಥಿ ರಾಮ್ ಸಿಂಗ್ ನೇತಾಜಿ, ಒಟ್ಟು ಆಸ್ತಿ 80 ಕೋಟಿ ರೂಪಾಯಿಯಾಗಿದ್ದು ಕಣದಲ್ಲಿ ಇರುವ ಪೈಕಿ ಎರಡನೇ ಸಿರಿವಂತ ಅಭ್ಯರ್ಥಿಯಾಗಿದ್ದಾರೆ.

ಫೆಬ್ರವರಿ 8 ರಂದು  ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಬಿಜೆಪಿ ಎಎಎಪಿ ಸೇರಿದಂತೆ ಮೂರು ಪಕ್ಷಗಳಿಂದ 164 ಕೋಟ್ಯಾದಿಪತಿಗಳು ಕಣಕ್ಕೆ  ಇಳಿದಿದ್ದಾರೆ.

ಇದು ಕಳೆದ  ವಿಧಾನಸಭಾ  ಚುನಾವಣೆಗೆ  ಹೋಲಿಕೆ ಮಾಡಿದರೆ ಈ ಭಾರಿ ಹೆಚ್ಚಿನ ಕೋಟ್ಯಾದಿಪತಿಗಳು ಕಣಕ್ಕೆ ಇಳಿದಿದ್ದಾರೆ 2015 ರಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ 143 ಅಭ್ಯರ್ಥಿಗಳು ಕಣದಲ್ಲಿ ಇದ್ದರು.ಆದರೆ ಈ ಭಾರಿ ಸಂಖ್ಯೆ ಹೆಚ್ಚಾಗಿದೆ.

13 ಅಭ್ಯರ್ಥಿಗಳು 50 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಪೈಕಿ ನಾಲ್ವರು  ಶ್ರೀಮಂತ ಅಭ್ಯರ್ಥಿಗಳು ಎಎಪಿಯವರಾಗಿದ್ದಾರೆ.ಎಎಪಿಯ ಬಾದರ್ಪುರ್ ಅಭ್ಯರ್ಥಿ ರಾಮ್ ಸಿಂಗ್ ನೇತಾಜಿ, ಒಟ್ಟು ಆಸ್ತಿ 80 ಕೋಟಿ ರೂ. ಈ ಹಿಂದೆ ಕಾಂಗ್ರೆಸ್ ಜೊತೆಗಿದ್ದ ನೇತಾಜಿ ಎರಡು ಬಾರಿ ಶಾಸಕರಾಗಿದ್ದರು. 

ನಾಲ್ಕನೇ ಶ್ರೀಮಂತ ಅಭ್ಯರ್ಥಿ ರಾಜ್ ಕುಮಾರ್ ಆನಂದ್ ಅವರು ಪಟೇಲ್ ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು,  76 ಕೋಟಿ ರೂ.ಗಳ ಆಸ್ತಿ ಘೋಷಿಸಿದ್ದಾರೆ. ಐದನೇ ಸ್ಥಾನದಲ್ಲಿ ಕಾಂಗ್ರೆಸ್ ನ ಪ್ರಿಯಾಂಕಾ ಸಿಂಗ್ ಇದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com