ವೀಡಿಯೋ: ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮೈರೋಮಾಂಚನಗೊಳ್ಳುವ ಸಾಹಸ ಪ್ರದರ್ಶಿಸಿದ  ಸಿಆರ್ಪಿಎಫ್ ಮಹಿಳಾ ಬೈಕರ್ಸ್

'ಸಿಆರ್‌ಪಿಎಫ್ ವುಮೆನ್ ಡೇರ್‌ಡೆವಿಲ್ಸ್' ಎಂದೇ ಕರೆಯಲ್ಪಡುವ  ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್‌ನ (ಸಿಆರ್‌ಪಿಎಫ್) ಮಹಿಳಾ ಬೈಕ್‌ ಸವಾರರು ಭಾರತದ 71 ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ  ಬೈಕ್ ಸಾಹಸವನ್ನು ಪ್ರದರ್ಶಿಸಿದ್ದಾರೆ. ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಿದ್ದ ಇನ್ಸ್ಪೆಕ್ಟರ್ ಸೀಮಾ ನಾಗ್, ಅವರು ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ನಮಸ್ಕರಿ
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮೈರೋಮ್ಂಆಚನಗೊಳ್ಳುವ ಸಾಹಸ ಪ್ರದರ್ಶಿಸಿದ  ಸಿಆರ್ಪಿಎಫ್ ಮಹಿಳಾ ಬೈಕರ್ಸ್
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮೈರೋಮ್ಂಆಚನಗೊಳ್ಳುವ ಸಾಹಸ ಪ್ರದರ್ಶಿಸಿದ ಸಿಆರ್ಪಿಎಫ್ ಮಹಿಳಾ ಬೈಕರ್ಸ್

ನವದೆಹಲಿ:,'ಸಿಆರ್‌ಪಿಎಫ್ ವುಮೆನ್ ಡೇರ್‌ಡೆವಿಲ್ಸ್' ಎಂದೇ ಕರೆಯಲ್ಪಡುವ  ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್‌ನ (ಸಿಆರ್‌ಪಿಎಫ್) ಮಹಿಳಾ ಬೈಕ್‌ ಸವಾರರು ಭಾರತದ 71 ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ  ಬೈಕ್ ಸಾಹಸವನ್ನು ಪ್ರದರ್ಶಿಸಿದ್ದಾರೆ. ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಿದ್ದ ಇನ್ಸ್ಪೆಕ್ಟರ್ ಸೀಮಾ ನಾಗ್, ಅವರು ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ನಮಸ್ಕರಿಸಿದ್ದು ವಿಶೇಷವಾಗಿತ್ತು.

ಹೆಡ್ ಕಾನ್ಸ್ಟೇಬಲ್ ಮೀನಾ ಚೌಧರಿ ತನ್ನ ಮೋಟಾರ್ ಸೈಕಲ್ ನಲ್ಲಿ ಅದ್ಭುತ ಸಮತೋಲನ ಸಾಧಿಸಿ  ತನ್ನ ಎರಡೂ ಕೈಗಳಲ್ಲಿ ಎರಡು 9 ಎಂಎಂ ಪಿಸ್ತೂಲ್ ಹಿಡಿದು ಗುಂಡು ಹಾರಿಸುವವರಂತೆ ನೀಡಿದ್ದ ಭಂಗಿ ನಿಜಕ್ಕೂ ಪ್ರಶಂಸೆ ಗಳಿಸಿದೆ.

"ನಾವು ಗಣರಾಜ್ಯೋತ್ಸವದ ಮೆರವಣಿಗೆಯ ಭಾಗವಾಗಲು ಬಹಳ ಸಮಯ ಕಾಯುತ್ತಿದ್ದೆವು. ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಮ್ಮಲ್ಲಿ ಹಲವರು ರಜೆಯಲ್ಲಿದ್ದರು. ಅಭ್ಯಾಸದ ಕಾರಣ ನಾವು ರಜೆಯನ್ನು ರದ್ದುಗೊಳಿಸಿದ್ದೆವು." ಎಂದು ಸಿಆರ್‌ಪಿಎಫ್‌ನ ಇನ್ಸ್‌ಪೆಕ್ಟರ್ ಸಿಮಾ ನಾಗ್ ಈ ಹಿಂದೆ ಸುದ್ದಿಗಾರರೊಡನೆ ಮಾತನಾಡಿ ಹೇಳಿದ್ದರು.

ಸಿಆರ್‌ಪಿಎಫ್ ಡೇರ್‌ಡೆವಿಲ್‌ನ ಮತ್ತೊಬ್ಬ ಮಹಿಳಾ ಸವಾರ, ಪ್ರತಿಮಾ ಬೆಹ್ರಾ  ಮಾತನಾಡಿ "ಇಂದು ನನ್ನ ಕನಸು ನನಸಾಗುತ್ತಿದೆ.. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ. ನಾನು ರಜಾದಿನಗಳಿಗಾಗಿ ಮನೆಯಲ್ಲಿರಬೇಕಿತ್ತು ಆದರೆ ಈ ಪ್ರದರ್ಶನದ ಬಗೆಗೆ ತಿಳಿದಾಗ ನು ನನ್ನ ರಜಾದಿನಗಳನ್ನು ರದ್ದುಗೊಳಿಸಿದ್ದೆ. ಗಣರಾಜ್ಯೋತ್ಸವದ ಮೆರವಣಿಗೆಗೆ ಅಭ್ಯಾಸ ಮಾಡಲು ಸೇರಿದೆ" ಎಂದರು.

18 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗಳಲ್ಲಿ ಒಟ್ಟು 65 ಸಿಆರ್‌ಪಿಎಫ್ ಮಹಿಳೆಯರು 9 ಮೋಟಾರ್‌ಸೈಕಲ್ ಸಾಹಸಗಳನ್ನು ಪ್ರದರ್ಶಿಸಿದ್ದರು.

ಗಣರಾಜ್ಯೋತ್ಸವ ಪೆರೆಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ ಶೆರ್ಗಿಲ್

ಫೋರ್ತ್ ಜನರೇಷನ್ ನ ಸೇನಾಧಿಕಾರಿ - ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಅವರು ಭಾನುವಾರ ರಾಷ್ಟ್ರ ರಾಜಧಾನಿಯ ರಾಜ್‌ಪಥ್ ನಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ ಪೆರೆಡ್ ನ ನೇತೃತ್ವ ವಹಿಸ್ ಇತಿಹಾಸ ನಿರ್ಮಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಆರ್ಮಿ ಡೇ ಪೆರೇಡ್‌ನಲ್ಲಿ ಪೆರೇಡ್ ಅಡ್ಜುಟಂಟ್ ಆಗಿ ಮೊದಲ ಮಹಿಳಾ ಅಧಿಕಾರಿಯಾಗಿದ್ದ ಶೆರ್ಗಿಲ್, ಕಾರ್ಪ್ಸ್ ಅನ್ನು ಮುನ್ನಡೆಸಿದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com