ಜನವರಿ 28 ರಿಂದ ಫೆಬ್ರವರಿ 03 ರವರಗೆ 11 ನೇ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ

ಹಲವಾರು ಸಮುದಾಯಗಳು ಪ್ರದರ್ಶಿಸುವ ಸಾಂಪ್ರದಾಯಿಕ ಆಹಾರದಿಂದ, ಮಕ್ಕಳ ಸ್ಪರ್ಧೆಗಳವರೆಗೆ, 11 ನೇ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ 2020 ರಲ್ಲಿ ಸಾಕಷ್ಟು ಚಟುವಟಿಕೆಗಳು ಇವೆ.
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ ಅಂಗವಾಗಿ ಭಾರತೀಯ ಸಂಸ್ಕಾರ ಗಾನಂ ಕಾರ್ಯಕ್ರಮ
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ ಅಂಗವಾಗಿ ಭಾರತೀಯ ಸಂಸ್ಕಾರ ಗಾನಂ ಕಾರ್ಯಕ್ರಮ
Updated on

ಚೆನ್ನೈ: ಹಲವಾರು ಸಮುದಾಯಗಳು ಪ್ರದರ್ಶಿಸುವ ಸಾಂಪ್ರದಾಯಿಕ ಆಹಾರದಿಂದ, ಮಕ್ಕಳ ಸ್ಪರ್ಧೆಗಳವರೆಗೆ, 11 ನೇ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ 2020 ರಲ್ಲಿ ಸಾಕಷ್ಟು ಚಟುವಟಿಕೆಗಳು ಇವೆ.

ಸುಮಾರು 500 ಸ್ಟಾಲ್‌ಗಳನ್ನು ಹೊಂದಿರುವ ಈ ಮೇಳದಲ್ಲಿ, ಕಾಡುಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ, ಪರಿಸರ ವಿಜ್ಞಾನವನ್ನು ಕಾಪಾಡುವುದು, ಪರಿಸರವನ್ನು ಕಾಪಾಡಿಕೊಳ್ಳುವುದು, ಕುಟುಂಬ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು, ಮಹಿಳೆಯರ ಗೌರವವನ್ನು ಬೆಳೆಸುವುದು ಮತ್ತು ದೇಶಭಕ್ತಿಯನ್ನು ಹುಟ್ಟುಹಾಕುವುದು ಸೇರಿದಂತೆ ಆರು ವಿಷಯಗಳೊಂದಿಗೆ ಆಯೋಜಿಸಲಾಗಿದೆ.

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಪ್ರತಿಷ್ಠಾನದ ಟ್ರಸ್ಟಿ ಆರ್.ರಾಜಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳನ್ನು ದೇಶಭಕ್ತಿ, ನಾಗರಿಕತೆಯ ಹೆಮ್ಮೆ ಮತ್ತು ಪರಂಪರೆಯೊಂದಿಗೆ ಅಳವಡಿಸಬೇಕು ಎಂದರು.

"ನಾವು ವಿದ್ಯಾರ್ಥಿಗಳನ್ನು ತಲುಪುವ ಮತ್ತು ಅವರಿಗೆ ಶಿಕ್ಷಣ ನೀಡುವ ವಿಷಯಗಳನ್ನು ಎಚ್ಚರಿಕೆಯಿಂದ ಆರಿಸಿದ್ದೇವೆ" ಎಂದು ಅವರು ಹೇಳಿದರು.

ಮೇಳವು ಜನವರಿ 28 ರಿಂದ ಫೆಬ್ರವರಿ 3 ರವರೆಗೆ ಚೆನ್ನೈನ ವೇಲಚೇರಿಯ ಗುರುನಾನಕ್ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ಶುಕ್ರವಾರ, 11 ಭಾಷೆಗಳಲ್ಲಿ ಆರು ವಿಷಯಗಳ ಮೇಲೆ ಹಾಡುಗಳನ್ನು ಪ್ರದರ್ಶಿಸುವ 'ಭಾರತೀಯ ಸಂಸ್ಕಾರ ಗಾನಂ' ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಯಿತು.

"ನಗರದಾದ್ಯಂತದ 40 ವಿವಿಧ ಶಾಲೆಗಳ ವಿದ್ಯಾರ್ಥಿಗಳು, ತಮಿಳು, ಸಂಸ್ಕೃತ, ಗುಜರಾತಿ, ಮರಾಠಿ, ತೆಲುಗು, ಹಿಂದಿ, ಒಡಿಶಾ, ಮಲಯಾಳಂ, ಪಂಜಾಬಿ, ಕನ್ನಡ ಮತ್ತು ಬಂಗಾಳಿ ಸೇರಿದಂತೆ 11 ವಿವಿಧ ಭಾಷೆಗಳಲ್ಲಿ ಹಾಡಿದರು. ಸಂದೇಶವನ್ನು ಹರಡಲು ಸಂಗೀತವು ಪರಿಣಾಮಕಾರಿ ಮಾಧ್ಯಮವಾಗಿದೆ, ಆದ್ದರಿಂದ ನಾವು ಮೇಳದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೆವು” ಎಂದು ರಾಜಲಕ್ಷ್ಮಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com