ಜೆಹನಾಬಾದ್: ಜೆಎನ್'ಯು ವಿದ್ಯಾರ್ಥಿ ಹಾಗೂ ಶಹೀನ್ ಬಾಗ್ ಪ್ರತಿಭಟನೆಯಲ್ಲಿ ಸಹಭಾಗಿತ್ವ ವಹಿಸಿದ್ದ ಶರ್ಜೀಲ್ ಇಮಾಮ್ ಅವರ ಕಿರಿಯ ಸಹೋದರ ಮುಜಾಮ್ಮಿಲ್ ಇಮಾಮ್'ನನ್ನು ಜೆಹನಾಬಾದ್ ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಇಮಾಮ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ದೆಹಲಿ ಪೊಲೀಸರು ಶರ್ಜೀಲ್ ಅವರ ಸಂಬಂಧಿಕರನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಇಮಾಮ್ ಅವರ ಕಿರಿಯ ಸಹೋದರನನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿದುಬಂದಿದೆ.
ಭಾರತದಿಂದ ಈಶಾನ್ಯ ವಲಯವನ್ನು ವಿಭಜಿಸುವಂತೆ ಕರೆ ನೀಡಿದ ಭಾಷಣ ವಿಡಿಯೋ ವೈರಲ್ ಆದ ಬಳಿಕ ಶರ್ಜೀಲ್ ಇಮಾಮ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಸಿಎಎ ಹಾಗೂ ಎನ್ಆರ್'ಸಿ ವಿರುದ್ಧ ಭಾಷಣ ಮಾಡಿ ಜನರನ್ನು ಉತ್ತೇಜಿಸಿದ ಆರೋಪದಲ್ಲಿ ದೆಹಲಿ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.
Advertisement