'ಗೋಡ್ಸೆ ಮತ್ತು ಮೋದಿಯದ್ದು ಒಂದೇ ಸಿದ್ದಾಂತ: ಗೋಡ್ಸೆಯನ್ನು ನಂಬುತ್ತೇನೆಂದು ಹೇಳುವ ಧೈರ್ಯ ಪಿಎಂಗಿಲ್ಲ'

ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ  ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ವಯನಾಡ್: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ  ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ,  ನರೇಂದ್ರ ಮೋದಿ  ಮತ್ತು ನಾಥೂರಾಮ್ ಗೊಡ್ಸೆ  ನಡುವಿನ ಏಕೈಕ ವ್ಯತ್ಯಾಸ ಎಂದರೆ ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳುವ ಧೈರ್ಯ ನರೇಂದ್ರ ಮೋದಿಗೆ ಇಲ್ಲ ಎಂದು ರಾಹುಲ್ ಗಾಂಧಿ  ಲೇವಡಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ದೊಡ್ಡ ಮಟ್ಟದ ಸಾಮೂಹಿಕ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. 

ಭಾರತೀಯರು ತಾವು ಭಾರತೀಯರೆಂದು ಸಾಬೀತುಪಡಿಸುವಂತೆ ಮಾಡಲಾಗುತ್ತಿದೆ.ನಾನು ಭಾರತೀಯನೇ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಯಾರು ಭಾರತೀಯ ಯಾರು ಭಾರತೀಯನಲ್ಲ ಎಂಬುದನ್ನು ನಿರ್ಧರಿಸಲು ಮೋದಿಗೆ ಪರವಾನಗಿ ನೀಡಿದ್ದು ಯಾರು, ನಾನು ಭಾರತೀಯ ಎಂದು ನನಗೆ ಗೊತ್ತು,  ಅದನ್ನು ಯಾರೋಬ್ಬರಿಗೂ ಸಾಬೀತು ಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ದೇಶದ ಜನ ನಿರುದ್ಯೋಗ ಮತ್ತು ನೌಕರಿ ಬಗ್ಗೆ ದನಿ ಎತ್ತಿದಾಗ  ಕೂಡಲೇ ಜನರ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಎನ್ ಆರ್ ಸಿ ಮತ್ತು ಸಿಎಎ ಗಳಿಂದ ಜನರಿಗೆ ಉದ್ಯೋಗ ಸಿಗುವುದಿಲ್ಲ.  ಕಾಶ್ಮೀರ ಮತ್ತು ಅಸ್ಸಾಂಗಳನ್ನು ಸುಡುವುದರಿಂದ ಉದ್ಯೋಗ ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಎಸ್​ಕೆಎಂಜೆ ಪ್ರೌಢ ಶಾಲೆಯಿಂದ ಆರಂಭವಾದ ಮೆರವಣಿಗೆ ಎರಡು ಕಿಲೋ ಮೀಟರ್​ವರೆಗೆ ಕ್ರಮಿಸಿತ್ತು. ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಮಿಕರು ಮೆರವಣಿಗೆಯ ಉದ್ದಕ್ಕೂ “ಸಂವಿಧಾನ ಉಳಿಸಿ” ಎಂದು ಘೊಷವಾಕ್ಯ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com