ಉತ್ತರ್ ಖಂಡ್: ಸೆರೆಹಿಡಿದ ಆನೆಗಳಿಗಾಗಿ ಜಿಮ್ ಸ್ಥಾಪನೆ!
ಡೆಹ್ರಡೂನ್: ಉತ್ತರ ಖಂಡ್ ರಾಜ್ಯದ ರಾಜಾಜಿ ಹುಲಿ ಅಭಯಾರಣ್ಯದಲ್ಲಿ ಸೆರೆಹಿಡಿದ ಆನೆಗಳ ಒತ್ತಡ ನಿಯಂತ್ರಿಸುವ ನಿಟ್ಟಿನಲ್ಲಿ ಜಿಮ್ ವೊಂದನ್ನು ಸ್ಥಾಪಿಸಲಾಗಿದೆ.
ಜಿಮ್ ನಿಂದ ಆನೆಗಳು ವ್ಯಾಯಾಮ ಮತ್ತು ಲವ ಲವಿಕೆಯಿಂದ ಇರಲಿವೆ.ದೈಹಿಕವಾಗಿ ಮತ್ತಷ್ಟು ಸದೃಢವಾಗಿ ಇರಲಿವೆ. ಕಾಡಿನಲ್ಲಿರುವ ಆನೆಗಳು ಸೆರೆಯಿಡಿಯಲ್ಪಟ್ಟ ಆನೆಗಳಿಗೆ ಹೆಚ್ಚು ದೈಹಿಕ ಸದೃಡತೆಯನ್ನು ಹೊಂದಿರುತ್ತವೆ ಎಂದು ಆರ್ ಟಿಐ ನಿರ್ದೇಶಕ ಅಮಿತ್ ವರ್ಮಾ ಹೇಳಿದ್ದಾರೆ.
ಸೆರೆಹಿಡಿದ ಆರು ಆನೆಗಳು, ಅವುಗಳಿಗೆ ಹೋಲಿಸಿದರೆ ಹೆಚ್ಚು ಚಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಜಿಮ್ ಅನ್ನು ಸ್ಥಾಪಿಸಲಾಗಿದೆ.ಆನೆಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಅವುಗಳ ಚಲನೆ ಅಗತ್ಯವಾಗಿದೆ. ಅವುಗಳನ್ನು ಮಾನಸಿಕ ಹಾಗೂ ದೈಹಿಕವಾಗಿ ಇಡುವ ನಿಟ್ಟಿನಲ್ಲಿ ವಿವಿಧ ವ್ಯಾಯಾಮ ಮಾಡಿಸಲಾಗುತ್ತದೆ ಎಂದು ಪಶುವೈದ್ಯ ಡಾ. ಅದಿತಿ ಶರ್ಮಾ ಹೇಳಿದರು.
ಪ್ರಸ್ತುತ ಆರು ಆನೆಗಳ ಪೈಕಿ ಮೂರು ವಯಸ್ಕ ಹಾಗೂ ಮರಿ ಆನೆಗಳಿದ್ದು, ಅವುಗಳಲ್ಲಿ ಜಿಮ್ ನಲ್ಲಿ ತರಬೇತಿ ನೀಡಲಾಗುತ್ತಿದೆ. ಜಿಮ್ ನಿಂದಾಗಿ ಹಿಂಡುಗಳಲ್ಲಿ ವಾಸಿಸುತ್ತಿದ್ದ ಅವುಗಳ ಒತ್ತಡವನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ವಿಜ್ಞಾನಿ ರಿತೇಶ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 6ರಿಂದ 8ರವರೆಗೂ ನಡೆದ ಸರ್ವೇ ಪ್ರಕಾರ ಉತ್ತರ ಖಂಡ್ ನಲ್ಲಿ ಶೇ.10 ರಷ್ಟು ಆನೆಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, 2026 ಆನೆಗಳಿವೆ.2019ರಲ್ಲಿ 21 ಆನೆಗಳು ಮೃತಪಟ್ಟಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ