ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನೋಟು ಅಮಾನ್ಯೀಕರಣ, ಜಿಎಸ್‍ಟಿ ಆಯಿತು, ಈಗ ಕೋವಿಡ್ ನಿರ್ವಹಣೆಯಲ್ಲೂ ಸರ್ಕಾರ ವಿಫಲ: ರಾಹುಲ್‍ ಟೀಕೆ

ಕೋವಿಡ್ ನಿರ್ವಹಣೆಯಲ್ಲೂ ಸಂಪೂರ್ಣ ವಿಫಲವಾಗಿದೆ. ಇದು ಹಾರ್ವರ್ಡ್‍ ವಾಣಿಜ್ಯ ಶಾಲೆಗೆ ಅಧ್ಯಯನಕ್ಕಾಗಿ ವಿಷಯವಾಗಲಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. 

ನವದೆಹಲಿ: ಕೊವಿಡ್‍ ಸಾಂಕ್ರಾಮಿಕ ರೋಗ ನಿರ್ವಹಣೆ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ, ಸರ್ಕಾರ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಅನುಷ್ಠಾನ ನಿರ್ವಹಣೆಯಲ್ಲಿ ವಿಫಲವಾಗಿತ್ತು. ಇದೀಗ ಕೋವಿಡ್ ನಿರ್ವಹಣೆಯಲ್ಲೂ ಸಂಪೂರ್ಣ ವಿಫಲವಾಗಿದೆ. ಇದು ಹಾರ್ವರ್ಡ್‍ ವಾಣಿಜ್ಯ ಶಾಲೆಗೆ ಅಧ್ಯಯನಕ್ಕಾಗಿ ವಿಷಯವಾಗಲಿದೆ ಎಂದು ಟೀಕಿಸಿದ್ದಾರೆ. 

ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮತ್ತು ಕೋವಿಡ್ ಪ್ರಕರಣಗಳ ವಿಷಯದಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನ ತಲುಪಿರುವುದನ್ನು ತೋರಿಸುವ ಗ್ರಾಫ್‍ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕ್ಲಿಪ್‍ ಅನ್ನು ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದಲ್ಲಿ ಕೋವಿಡ್ -19 ನಿರ್ವಹಿಸುವ ಕುರಿತು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮುಂದೆ ಮೋದಿ ಸರ್ಕಾರ ಶರಣಾಗಿದೆ ಎಂದು ಈ ಹಿಂದೆ ಟ್ವೀಟ್ ನಲ್ಲಿ ರಾಹುಲ್ ಟೀಕಿಸಿದ್ದರು. ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಭಾರತ, ಭಾನುವಾರ ರಷ್ಯಾವನ್ನು ಮೀರಿಸಿದೆ. 

ಸದ್ಯ, ಕರೋನವೈರಸ್ ರೋಗ ಪ್ರಕರಣಗಳಲ್ಲಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ದೇಶವೇನಿಸಿದೆ.ಭಾರತದಲ್ಲಿ ಭಾನುವಾರ 24,422 ಹೊಸ ಕೊವಿಡ್‍ ಪ್ರಕರಣಗಳು ಮತ್ತು 421 ಸಾವುಗಳು ವರದಿಯಾಗಿದ್ದವು.

Related Stories

No stories found.

Advertisement

X
Kannada Prabha
www.kannadaprabha.com