ಪಾತಕಿ ವಿಕಾಸ್ ದುಬೆ ಆಸ್ತಿಗಳ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭ

ಕಾನ್ಪುರದಲ್ಲಿ ಶುಕ್ರವಾರ ಎಸ್‌ಟಿಎಫ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ. 
ವಿಕಾಸ್ ದುಬೆ
ವಿಕಾಸ್ ದುಬೆ
Updated on

ಲಖನೌ: ಕಾನ್ಪುರದಲ್ಲಿ ಶುಕ್ರವಾರ ಎಸ್‌ಟಿಎಫ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ. 

ದುಬೆ, ಅವನ ಕುಟುಂಬ ಸದಸ್ಯರು ಮತ್ತು ಸಹಚರರ ಒಡೆತನದ ಆಸ್ತಿಗಳ ವಿವರಗಳನ್ನು ಇಡಿ ಕೋರಿದೆ.
ಉತ್ತರ ಪ್ರದೇಶದಲ್ಲಿ ಬೆನಾಮಿ ವಹಿವಾಟಿನಡಿ 11 ಮನೆಗಳು ಮತ್ತು 16 ಫ್ಲ್ಯಾಟ್‌ಗಳನ್ನು ದುಬೆ ಹೊಂದಿರುವ ಶಂಕೆ ಇದೆ ಎಂದು ಇಲ್ಲಿನ ಮೂಲಗಳು ತಿಳಿಸಿವೆ.

ಕಳೆದ ಮೂರು ವರ್ಷಗಳಲ್ಲಿ 14 ದೇಶಗಳಿಗೆ ಭೇಟಿ ನೀಡಿದ್ದು, ವಿದೇಶಗಳಲ್ಲೂ ಆಸ್ತಿಗಳನ್ನು ಹೊಂದಿರುವ ಸಾಧ್ಯೆ ಇದೆ. ಸದ್ಯ 11 ಮನೆಗಳು ಮತ್ತು 16 ಫ್ಲ್ಯಾಟ್‌ಗಳು ಅವನಿಗೆ ಸೇರಿವೆ ಎಂದು ವರದಿಯಾಗಿದೆ.

ಲಖನೌದ ಆರ್ಯನಗರದಲ್ಲಿ ಇತ್ತೀಚೆಗೆ ಅವನು ಖರೀದಿಸಿದ 23 ಕೋಟಿ ರೂ.ಮೌಲ್ಯದ ಬಂಗಲೆ ಇದರಲ್ಲಿ ಸೇರಿದೆ.
ಇನ್ನು, ವಿಕಾಸ್ ದುಬೆ ಸಹಚರರು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಥಾಯ್ಲೆಂಡ್‍ ನಲ್ಲಿ ಮನೆಗಳನ್ನು ಖರೀದಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ, 2002 ರ ನಿಬಂಧನೆಗಳ ಅಡಿ ಅಪರಾಧಿ ದುಬೆ, ಅವನ ಕುಟುಂಬ ಸದಸ್ಯರು ಮತ್ತು ಸಹಚರರ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗೆ ನಿರ್ದೇಶನ ನೀಡುವಂತೆ ಕಾನ್ಪುರ ಪೊಲೀಸರಿಗೆ ಜುಲೈ 6 ರಂದು ಇಡಿ ಆದೇಶಿಸಿತ್ತು. 

ದುಬೆ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಸಹ ತನಿಖಾ ಸಂಸ್ಥೆ ಕೇಳಿದೆ. ಕೆಲ ಪ್ರಭಾವಿ ಉದ್ಯಮಿಗಳಿಗೆ ದುಬೆ ಹಣ ಅಕ್ರಮ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿರುವುದರಿಂದ ಆಸ್ತಿಗಳನ್ನು ತನಿಖೆ ಮಾಡಬೇಕು ಎಂದು ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. 

60ಕ್ಕು ಹೆಚ್ಚು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಪಾತಕಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರುವಾರ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಕಾನ್ಪುರದಲ್ಲಿ ಆರು ದಿನಗಳ ಹಿಂದೆ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಹತ್ಯೆ ಮಾಡಿ ಆರು ಮಂದಿಯನ್ನು ಗಾಯಗೊಳಿಸಿದ್ದರು.

ಉಜ್ಜಯಿನಿಯಿಂದ ಕರೆತರುತ್ತಿದ್ದಾಗ ಬುಧವಾರ ಮುಂಜಾನೆ ಕಾನ್ಪುರ ಬಳಿ ಎನ್‍ಕೌಂಟರ್‍ ನಲ್ಲಿ ದುಬೆ ಹೆಣವಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com