ಕೋವಿಡ್‍ ಚೇತರಿಕೆ ಪ್ರಮಾಣ ಶೇ 63.02ಕ್ಕೆ ಏರಿಕೆ: 19 ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಅಧಿಕ

ಶ್ರೇಣೀಕೃತ ನೀತಿ ಮತ್ತು ಸಮಗ್ರ ವಿಧಾನಗಳಿಂದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,850 ಜನರು ಕೊವಿಡ್‍ ಸೋಂಕಿನಿಂದ ಚೇತರಿಸಿಕೊಳ್ಳಲು ಕಾರಣವಾಗಿದ್ದು, ಇದರೊಂದಿಗೆ ಚೇತರಿಸಿಕೊಂಡ ಪ್ರಕರಣಗಳ ಒಟ್ಟು ಸಂಖ್ಯೆ 5,53,470 ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಶ್ರೇಣೀಕೃತ ನೀತಿ ಮತ್ತು ಸಮಗ್ರ ವಿಧಾನಗಳಿಂದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,850 ಜನರು ಕೊವಿಡ್‍ ಸೋಂಕಿನಿಂದ ಚೇತರಿಸಿಕೊಳ್ಳಲು ಕಾರಣವಾಗಿದ್ದು, ಇದರೊಂದಿಗೆ ಚೇತರಿಸಿಕೊಂಡ ಪ್ರಕರಣಗಳ ಒಟ್ಟು ಸಂಖ್ಯೆ 5,53,470 ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಇಂದು ಚೇತರಿಕೆ ಪ್ರಮಾಣ ಶೇ 63.02 ಕ್ಕೆ ಏರಿದ್ದು, 19 ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಈ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್ -19 ಹರಡುವಿಕೆ ತಡೆಗಟ್ಟಲು ಮತ್ತು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಿಯಾಪರ ಮತ್ತು ಸಂಘಟಿತ ಕ್ರಮಗಳಿಂದ ಚೇತರಿಕೆ ಪ್ರಮಾಣ ಕ್ರಮೇಣ ಏರಿಕೆಗೆ ಕಾರಣವಾಗಿದೆ. ಪರೀಕ್ಷೆಗಳನ್ನು ಹೆಚ್ಚಿಸುವುದರೊಂದಿಗೆ ಸಮಯೋಚಿತ ರೋಗಪತ್ತೆಯಿಂದ ಕೋವಿಡ್ ಪೀಡಿತ ರೋಗಿಗಳು ರೋಗದ ಮುಂದಿನ ಹಂತಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕಂಟೈನ್‍ಮೆಂಟ್‍ ವಲಯಗಳ ಪರಿಣಾಮಕಾರಿ ಅನುಷ್ಠಾನ, ಕಣ್ಗಾವಲು ಚಟುವಟಿಕೆಗಳಿಂದ ಸೋಂಕಿನ ಪ್ರಕರಣಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ದೇಶದಲ್ಲಿ ಕೋವಿಡ್-19 ಸಾವಿನ ಪ್ರಮಾಣ ಶೇ.2.64 ಇದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣವನ್ನು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ ಎಂದು ಕೇಂದ್ರ ತಿಳಿಸಿದೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 28,701 ಹೊಸ ಪ್ರಕರಣಗಳು ವರದಿಯಾಗಿದ್ದು, 500 ಮಂದಿ ಮೃತಪಟ್ಟಿದ್ದಾರೆ.

ಇದುವರೆಗೆ ದೇಶದಲ್ಲಿ 8 ಲಕ್ಷದ 78 ಸಾವಿರದ 254 ಪಾಸಿಟಿವ್ ಕೇಸುಗಳು ವರದಿಯಾಗಿದ್ದು ಅವರಲ್ಲಿ 3 ಲಕ್ಷದ 1 ಸಾವಿರದ 609 ಸಕ್ರಿಯ ಕೇಸುಗಳು, 5 ಲಕ್ಷದ 53 ಸಾವಿರದ 471 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com