ಪಕ್ಷದ ವಿಪ್ ಉಲ್ಲಂಘಿಸಿ ಅಶೋಕ್ ಗೆಹ್ಲೋಟ್ ಗೆ ಬೆಂಬಲ ಸೂಚಿಸಿದ ಬಿಟಿಪಿ ಶಾಸಕರು

ಭಾರತೀಯ ಟ್ರೈಬಲ್ ಪಕ್ಷ(ಬಿಟಿಪಿ)ದ ಇಬ್ಬರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಗೆ ಬೆಂಬಲ ಪತ್ರ ನೀಡುತ್ತಿರುವ ಬಿಟಿಪಿ ಶಾಸಕರು
ಅಶೋಕ್ ಗೆಹ್ಲೋಟ್ ಗೆ ಬೆಂಬಲ ಪತ್ರ ನೀಡುತ್ತಿರುವ ಬಿಟಿಪಿ ಶಾಸಕರು

ಜೈಪುರ: ಭಾರತೀಯ ಟ್ರೈಬಲ್ ಪಕ್ಷ(ಬಿಟಿಪಿ)ದ ಇಬ್ಬರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ಶಾಸಕರು ರಾಜಸ್ಥಾನ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ. ಅಲ್ಲದೆ ಬಿಟಿಪಿ ಶಾಸಕರು ತಮಗೆ ಬೆಂಬಲ ಪತ್ರ ನೀಡುತ್ತಿರುವ ಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ.

ಈ ಮುಂಚೆ ಬಿಟಿಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗುಜರಾತ್ ಶಾಸಕ ಮಹೇಶ್ ವಾಸವ ಅವರು ತಮ್ಮ ಪಕ್ಷ ರಾಜಸ್ಥಾನದ ಇಬ್ಬರೂ ಶಾಸಕರಾದ ರಾಮಪ್ರಸಾದ್ ದಿಂಡೋರ್ ಮತ್ತು ರಾಜಕುಮಾರ್ ರೋಟ್ ಅವರಿಗೆ ವಿಪ್ ನೀಡಿ, ವಿಶ್ವಾಸಮತಯಾಚನೆ ವೇಳೆ ಗೈರು ಆಗುವಂತೆ ಮತ್ತು ಯಾರಿಗೂ ಬೆಂಬಲ ನೀಡಬೇಡಿ ಎಂದು ಸೂಚಿಸಲಾಗಿತ್ತು.

ರಾಜಸ್ಥಾನದಲ್ಲಿ ಸದ್ಯದ ರಾಜಕೀಯ ಬಿಕ್ಕಟ್ಟಿನ ಗಮನಿಸಿದರೆ ಅಶೋಕ್ ಗೆಹ್ಲೋಟ್ ಅವರು ವಿಶ್ವಾಸಮತಯಾಚಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ನೀವಿಬ್ಬರೂ ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ಹಾಕುವ ಬದಲು ತಟಸ್ಥವಾಗಿರಬೇಕು ಮತ್ತು ವಿಶ್ವಾಸಮತ್ತಕ್ಕೆ ಗೈರಾಗಬೇಕು ಎಂದು ವಿಪ್ ನಲ್ಲಿ ಈ ಇಬ್ಬರು ಶಾಸಕರಿಗೆ ತಿಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com