ಅಸ್ಸಾಂನಲ್ಲಿ ಭೀಕರ ಪ್ರವಾಹ: 30 ಜಿಲ್ಲೆಗಳು ಜಲಾವೃತ, 76 ಮಂದಿ, 96 ಕಾಡು ಪ್ರಾಣಿಗಳ ಸಾವು

ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ 76 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಪ್ರವಾಹದ ಹೊಡೆತಕ್ಕೆ 96 ಕಾಡು ಪ್ರಾಣಿಗಳೂ ಕೂಡ ಸಾವನ್ನಪ್ಪಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುವಾಹತಿ: ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ 76 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಪ್ರವಾಹದ ಹೊಡೆತಕ್ಕೆ 96 ಕಾಡು ಪ್ರಾಣಿಗಳೂ ಕೂಡ ಸಾವನ್ನಪ್ಪಿವೆ.

ಅಸ್ಸಾಂನ 30 ಜಿಲ್ಲೆಗಳಲ್ಲಿ ಮಳೆ ಮುಂದುವರೆದದ್ದು, ಭೀಕರ ಪ್ರವಾಹ ಉಂಟಾಗಿದೆ. ಇದರಿಂದ 53,99,017 ಜನರು ಬಾಧಿತರಾಗಿದ್ದಾರೆ. ನೆರೆಯಿಂದಾಗಿ 76, ಭೂ ಕುಸಿತದಿಂದ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲಾಡಳಿತದೊಂದಿಗೆ ರಾಜ್ಯ ವಿಪತ್ತು ದಳದ ಸಿಬ್ಬಂದಿ 2,389 ಜನರನ್ನು ರಕ್ಷಿಸಲಾಗಿದೆ. ಪ್ರಸ್ತುತ ಅಸ್ಸಾಂನ 3,014 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 1,27,955,33 ಹೆಕ್ಟೇರ್‌ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. 487 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. 

ರಾಷ್ಟ್ರೀಯ ಉದ್ಯಾನ ಜಲಾವೃತ
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, 76 ಪ್ರಾಣಿಗಳು ಮೃತಪಟ್ಟಿವೆ. 170 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಖಡ್ಗಮೃಗಗಳ ಮುಖ್ಯ ಆವಾಸ ಸ್ಥಾನ ಎನಿಸಿರುವ ಉದ್ಯಾನದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಮೃತ ಪ್ರಾಣಿಗಳ ಪೈಕಿ 9 ರೈನೋಗಳು, 4 ಕಾಡುಕೋಣಗಳು, 7 ಕಾಡು ಹಂದಿಗಳು, 2 ಜಿಂಕೆಗಳು, 82 ಕೃಷ್ಣಮೃಗಗಳು ಸಾವನ್ನಪ್ಪಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com