ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಪೀಡಿಸಿದರೆ ವಿಚ್ಛೇದನ ನೀಡಬಹುದು: ಕೇರಳ ಕೋರ್ಟ್ ಮಹತ್ವದ ತೀರ್ಪು!

ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಅಥವಾ ಕುಟುಂಬದಿಂದ ದೂರ ಇಡುವಂತೆ ಪೀಡಿಸುವುದು ಕೌರ್ಯ. ಇಂತಹ ನಡೆಯ ಅಧಾರದ ಮೇಲೆ ಪತ್ನಿಗೆ ವಿಚ್ಧೇಧನ ನೀಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಅಥವಾ ಕುಟುಂಬದಿಂದ ದೂರ ಇಡುವಂತೆ ಪೀಡಿಸುವುದು ಕೌರ್ಯ. ಇಂತಹ ನಡೆಯ ಅಧಾರದ ಮೇಲೆ ಪತ್ನಿಗೆ ವಿಚ್ಧೇಧನ ನೀಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಸುಪ್ರೀಂ ಕೋರ್ಟ್ 2016ರ ಆದೇಶವನ್ನು ಉಲ್ಲೇಖಿಸಿ ಈ ಮಹತ್ವದ ಆದೇಶ ನೀಡಿದೆ. ಹೆಂಡತಿಯರು ಅತ್ತೆಯನ್ನು ಅಥವಾ ಗಂಡನ ಪೋಷಕರನ್ನು ಮನೆಯಿಂದ ಹೊರಹಾಕು ಅಥವಾ ನಮಗೇ ಪ್ರತ್ಯೇಕ ಮನೆ ಮಾಡು ಎಂದು  ಗಂಡನನ್ನು ಪೀಡಿಸಿದರೆ, ಗಂಡ ಹೆಂಡತಿಗೆ ವಿಚ್ಛೇದನ ನೀಡಬಹುದು ಎಂದು ಹೇಳಿದೆ.

ತನ್ನ ತಾಯಿಯನ್ನು ಮನೆಯಿಂದ ಆಚೆ ಹಾಕು ಅಥವಾ ನಮಗೆ ಬೇರೆ ಮನೆ ಮಾಡು ಎಂದು ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ. ಆಕೆಯಿಂದ ನನಗೆ ವಿಚ್ಛೇದನ ಕೊಡಿಸಿ ಎಂದು ಕಣ್ಣೂರು ಜಿಲ್ಲೆಯ ತಲಶೇರಿಯ 41 ವರ್ಷದ ವ್ಯಕ್ತಿಯೊಬ್ಬ ಹೈಕೋರ್ಟ್ ಮೆಟ್ಟಿಲೇರಿದ್ದರು. 2014ರಲ್ಲೇ ಈತ  ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಆಗ ಈ ಅರ್ಜಿಯನ್ನ ಫ್ಯಾಮಿಲಿ ಕೋರ್ಟ್ ವಜಾಗೊಳಿಸಿತ್ತು. ಇದನ್ನ ಪ್ರಶ್ನಿಸಿ ಈ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ವಿಭಾಗೀಯ ಪೀಠದ  ನ್ಯಾಯಮೂರ್ತಿಗಳಾದ ಎ.ಎಂ. ಶಫೀಕ್ ಮತ್ತು ಮೇರಿ ಜೋಸೆಫ್ ಅವರು ಈ ಮಹತ್ವದ ಆದೇಶ ನೀಡಿದ್ದಾರೆ. 

'ಜಗಳ ಮಾಡದೆ ಯಾವ ಕುಟುಂಬಗಳಿರುತ್ತವೆ. ಹಿರಿಯರು ಚಿಕ್ಕವರನ್ನ ಬೈಯೋದು ಸಾಮಾನ್ಯ. ಅದೇ ರೀತಿಯಲ್ಲಿ ಸೊಸೆಗೆ ಮನೆಯಲ್ಲಿ ಕೆಲಸಗಳನ್ನ ಮಾಡು ಅಂತ ಅತ್ತೆ ಹೇಳೋದು ಕೂಡ ಅಪರೂಪ ಏನಲ್ಲ. ಆದರೆ, ಅತ್ತೆಯನ್ನ ಮನೆಯಿಂದ ಹೊರ ಹಾಕು ಎಂದು ಗಂಡನ ಮೇಲೆ  ಒತ್ತಡ ಹಾಕುವುದನ್ನ ಕ್ರೌರ್ಯ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.  

ಈ ಬಗ್ಗೆ 2003ರಲ್ಲಿ ವಿಜಯ್ ಕುಮಾರ್ ರಾಮಚಂದ್ರ ಭಾಟೆ ವರ್ಸಸ್ ನೀಲಾ ವಿಜಯ್ ಕುಮಾರ್ ಭಾಟೆ ಅವರ ಪ್ರಕರಣವನ್ನ ಪೀಠ ಉಲ್ಲೇಖಿಸಿದೆ. ಹಿಂದೂ ಸಮಾಜದಲ್ಲಿ ಪೋಷಕರನ್ನ ನೋಡಿಕೊಳ್ಳುವುದು ಮಗನ ಕರ್ತವ್ಯ. ಹೀಗಾಗಿ ಹೆತ್ತವರಿಂದ ಮಗನನ್ನ ದೂರ ಮಾಡಬೇಕು, ಆತನ  ಸಾಮಾಜಿಕ ಬದ್ಧತೆಯಿಂದ ದೂರ ಮಾಡಬೇಕು ಅಂದ್ರೆ ಪತ್ನಿಯ ಬಳಿ ಸೂಕ್ತ ಕಾರಣ ಇರಬೇಕು ಅಂತ 2003ರ ತೀರ್ಪನ್ನ ಉಲ್ಲೇಖಿಸಿದೆ. ಇದಾದ ಬಳಿಕ ಈ ಪ್ರಕರಣದಲ್ಲಿ ಹೆಂಡತಿಯದ್ದು ಕ್ರೌರ್ಯ ಅಂತ ಪರಿಗಣಿಸಿ ದಂಪತಿಗೆ ವಿಚ್ಛೇದನ ನೀಡಬೇಕು ಎಂದು ಹೇಳಿದ್ದು, ಈ ಹಿಂದೆ  ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸಿದೆ.

2003ರಲ್ಲಿ ಮದುವೆಯಾಗಿದ್ದ ಜೋಡಿಗೆ ಒಬ್ಬ ಮಗಳಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com