ಕಾಡಾನೆ
ದೇಶ
ಪೈಶಾಚಿಕ ಕೃತ್ಯ: ಗರ್ಭಿಣಿ ಕಾಡಾನೆಗೆ ಪಟಾಕಿ ತುಂಬಿದ ಅನಾನಸ್ ನೀಡಿ ಕೊಂದ ಕೀಚಕರು!
ಆಹಾರ ಅರಸಿ ಕಾಡು ಪ್ರಾಣಿಗಲು ನಾಡಿಗೆ ಬರುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಕೀಚಕರು ನಾಡಿಗೆ ಗರ್ಭೀಣಿ ಕಾಡಾನೆಗೆ ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ಕೊಟ್ಟು ಸ್ಫೋಟಿಸಿ ಕೊಂದಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂ: ಆಹಾರ ಅರಸಿ ಕಾಡು ಪ್ರಾಣಿಗಲು ನಾಡಿಗೆ ಬರುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಕೀಚಕರು ನಾಡಿಗೆ ಗರ್ಭೀಣಿ ಕಾಡಾನೆಗೆ ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ಕೊಟ್ಟು ಸ್ಫೋಟಿಸಿ ಕೊಂದಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಅನಾನಸ್ ಹಣ್ಣು ಎಂದು ತಿಳಿದ ಕಾಡಾನೆ ಅದನ್ನು ಜಗಿಯುತ್ತಿರುವಾಗ ಪಟಾಕಿ ಸ್ಫೋಟಿಸಿದೆ. ಈ ವೇಳೆ ಆನೆಯ ಬಾಯಿಗೆ ಗಂಭೀರ ಗಾಯವಾಗಿತ್ತು. ನೋವಿನಿಂದ ಆನೆ ಸಮೀಪದ ವೆಲ್ಲಿಯೂರ್ ನದಿಯಲ್ಲಿ ಹೋಗಿ ನಿಂತಿದೆ.
ಈ ಕಾಡಾನೆ ನಾಡಿಗೆ ಬರುತ್ತಿದ್ದದ್ದು ಇದೇ ಮೊದಲೆನಲ್ಲ. ಬಂದು ಸಿಕ್ಕ ಆಹಾರವನ್ನು ತಿಂದು ಯಾರಿಗೂ ಹಾನಿ ಮಾಡದೆ ಮತ್ತೆ ಕಾಡಿಗೆ ಮರಳುತ್ತಿತ್ತು. ಆದರೆ ದುರುಳರು ಮಾತ್ರ ಈ ಪೈಶಾಚಿಕ ಕೃತ್ಯ ನಡೆಸಿ ಆನೆ ಸಾವಿಗೆ ಕಾರಣರಾಗಿದ್ದಾರೆ.
ನದಿಯಲ್ಲಿ ನಿಂತ ಆನೆಯನ್ನು ಗಮನಿಸಿ ಅರಣ್ಯಾಧಿಕಾರಿಗಳು ಅನುಮಾನಗೊಂಡು ಅದರ ನೆರವಿಗೆ ಧಾವಿಸಿದ್ದರು. ಆದರೆ ನೀರಿನಿಂದ ಕಾಡಾನೆಯನ್ನು ಹೊರತರಲು ಸಾಧ್ಯವಾಗಲಿಲ್ಲ. ನೋವಿನಲ್ಲೆ ಕಾಡಾನೆ ಕೊನೆಯುಸಿರೆಳೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ