ಖ್ಯಾತ ಧಾರಾವಾಹಿ ನಟಿ ಸೇರಿದಂತೆ ಕುಟುಂಬದ 6 ಮಂದಿಗೆ ಕೊರೋನಾ ವೈರಸ್ ಸೋಂಕು!

ಮಾರಕ ಕೊರೋನಾ ವೈರಸ್ ಸೆಲೆಬ್ರಿಟಿಗಳಿಗೂ ಹಬ್ಬಿದ್ದು, ಉತ್ತರಾಖಂಡದಲ್ಲಿ ಖ್ಯಾತ ಧಾರಾವಾಹಿ ನಟಿ ಮತ್ತು ಆಕೆಯ ಕುಟುಂಬದ ಐವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.
ನಟಿ ಮೊಹೆನಾ ಕುಮಾರಿ ಸಿಂಗ್
ನಟಿ ಮೊಹೆನಾ ಕುಮಾರಿ ಸಿಂಗ್
Updated on: 

ಡೆಹ್ರಾಡೂನ್: ಮಾರಕ ಕೊರೋನಾ ವೈರಸ್ ಸೆಲೆಬ್ರಿಟಿಗಳಿಗೂ ಹಬ್ಬಿದ್ದು, ಉತ್ತರಾಖಂಡದಲ್ಲಿ ಖ್ಯಾತ ಧಾರಾವಾಹಿ ನಟಿ ಮತ್ತು ಆಕೆಯ ಕುಟುಂಬದ ಐವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.

ಈ ಬಗ್ಗೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದು, ನಾವೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಮೂಲದಳ ಪ್ರಕಾರ ಹಿಂದಿಯ ಖ್ಯಾತ ಯೆ ರಿಷ್ತಾ ಕ್ಯಾ ಕೆಹ್ಲಾತಾ ಹೈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮೊಹೆನಾ ಕುಮಾರಿ ಸಿಂಗ್ ಮತ್ತು ಅವರ ಇತರೆ ಐದು ಕುಟುಂಬಸ್ಥರಿಗೆ ಕೊರೋನಾ  ಸೋಂಕು ತಗುಲಿದೆ. ಪ್ರಸ್ತುತ ಉತ್ತರಖಾಂಡದ ರಿಷಿಕೇಶದಲ್ಲಿರುವ ಆಸ್ಪತ್ರೆಯಲ್ಲಿ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ. ನಟಿ ಮೊಹೆನಾ ಕುಮಾರಿ ಸಿಂಗ್, ಅವರ ಪತಿ ಸುಯೇಷ್ ರಾವತ್, ಅವರ ಅತ್ತೆ, ಮಾವ ಸೇರಿದಂತೆ ಕುಟುಂಬದ ಐವರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.
 
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ 31 ವರ್ಷದ ನಟಿ ಮೊಹೆನಾ ಕುಮಾರಿ ಸಿಂಗ್, ನಮ್ಮ ಅತ್ತೆಗೆ ಮೊದಲು ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಆತಕಂಕ್ಕೀಡಾದ ನಾವು ಕೊರೋನಾ ಟೆಸ್ಟ್ ಮಾಡಿಸಿದ್ದೆವು. ಆಗ ನೆಗೆಟಿವ್ ವರದಿ ಬಂದಿತ್ತು. ಹೀಗಾಗಿ ನಾವು ಸಮಾಧಾನಪಟ್ಟುಕೊಂಡೆವು. ಆದರೆ ಅವರಲ್ಲಿ  ಜ್ವರದ ಲಕ್ಷಣಗಳು ಕಡಿಮೆಯಾಗದ ಹಿನ್ನಲೆಯಲ್ಲಿ ನಾವೆಲ್ಲರೂ ಟೆಸ್ಟ್ ಗೆ ಒಳಗಾದೆವು. ನಮ್ಮ ವರದಿ ಪಾಸಿಟಿವ್ ಬಂದಿತ್ತು. ನಮಗೆ ವೈರಸ್ ನ ಯಾವುದೇ ರೀತಿಯ ಲಕ್ಷಣಗಳೂ ಗೋಚರಿಸುತ್ತಿರಲಿಲ್ಲ. ಎಲ್ಲರೂ ಸಾಮಾನ್ಯವಾಗಿಯೇ ಇದ್ದೆವು. ಆದರೂ ಸೋಂಕು ತಗುಲಿದೆ. ನಮ್ಮ ಕುಟುಂಬದಲ್ಲಿ ನಮ್ಮ ಭಾವನವರನ್ನು  ಬಿಟ್ಟು ಬಾಕಿ ಎಲ್ಲರ ವೈರದಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. 

ಸಂಪೂರ್ಣವಾಗಿ ಗುಣಮುಖರಾಗುವರೆಗೂ ನಾವು ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತೇವೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com