ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಎನ್ ಕೌಂಟರ್: 3 ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಐಇಡಿ ತಜ್ಞ ಸೇರಿದಂತೆ ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.
ಭದ್ರತಾಪಡೆ ಪೊಲೀಸರ ಕಾರ್ಯಾಚರಣೆ
ಭದ್ರತಾಪಡೆ ಪೊಲೀಸರ ಕಾರ್ಯಾಚರಣೆ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಐಇಡಿ ತಜ್ಞ ಸೇರಿದಂತೆ ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.

ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಂದು ನಸುಕಿನ ಜಾವ ಪುಲ್ವಾಮಾ ಜಿಲ್ಲೆಯ ಕಂಗನ್ ಗ್ರಾಮವನ್ನು ಸುತ್ತುವರಿದರು. ನಂತರ ಮನೆಮನೆಗೆ ಹೋಗಿ ಹುಡುಕಿದರು. ಈ ವೇಳೆ ಉಗ್ರರು ಸಿಕ್ಕಿಬಿದ್ದು ಅವರನ್ನು ಶರಣಾಗುವಂತೆ ಪೊಲೀಸರು ಹೇಳಿದರು. ಅದಕ್ಕೆ ಒಪ್ಪದೆ ಉಗ್ರರು ಏಕಾಏಕಿ ದಾಳಿ ಮಾಡಲಾರಂಭಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿ ಉಗ್ರರನ್ನು ಕೊಂದು ಹಾಕಿದ್ದಾರೆ. ಸೇನೆ, ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com