ಹಾಸಿಗೆಗೆ ಕಟ್ಟಿ ಹಾಕಿರುವ ವೃದ್ಧ
ಹಾಸಿಗೆಗೆ ಕಟ್ಟಿ ಹಾಕಿರುವ ವೃದ್ಧ

ಅಮಾನವೀಯ ಘಟನೆ: ಚಿಕಿತ್ಸೆ ವೆಚ್ಚ ಭರಿಸದ ವೃದ್ಧನನ್ನು ಹಾಸಿಗೆಗೆ ಕಟ್ಟಿ ಹಾಕಿದ ಆಸ್ಪತ್ರೆ!

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಅಮಾನವೀಯ, ಆತಂಕಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ಪಡೆದು ಶುಲ್ಕ ಪಾವತಿಸದ ಕಾರಣಕ್ಕಾಗಿ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್ಡ್ ಗೆ ಕಟ್ಟಿ ಹಾಕಿ ಆಸ್ಪತ್ರೆ ಆಡಳಿತ ಮಂಡಳಿ ಕ್ರೂರವಾಗಿ ವರ್ತಿಸಿದೆ. 

ಭೂಪಾಲ್: ಮಧ್ಯಪ್ರದೇಶದ ಭೂಪಾಲ್ ನಲ್ಲಿ ಅಮಾನವೀಯ, ಆತಂಕಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ಪಡೆದು ಶುಲ್ಕ ಪಾವತಿಸದ ಕಾರಣಕ್ಕಾಗಿ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್ಡ್ ಗೆ ಕಟ್ಟಿ ಹಾಕಿ ಆಸ್ಪತ್ರೆ ಆಡಳಿತ ಮಂಡಳಿ ಕ್ರೂರವಾಗಿ ವರ್ತಿಸಿದೆ. 

ಆದಾಗ್ಯೂ, ಆ ವೃದ್ಧ ವ್ಯಕ್ತಿ ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೈ ಹಾಗೂ ಕಾಲುಗಳನ್ನು ಹಾಸಿಗೆ ಬೆಡ್ ಗಳಿಗೆ ಕಟ್ಟಿಹಾಕಲಾಗಿತ್ತು ಎಂದು ಆಸ್ಪತ್ರೆ ಆಡಳಿತ ಮಂಡಳಿ  ಹೇಳಿಕೊಂಡಿದೆ. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಶಾಜಪುರ ಮೂಲದ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಘಟನೆ ಸಂಬಂಧ ಜಿಲ್ಲಾ ಆಸ್ಪತ್ರೆ ತನಿಖೆಗೆ ಆದೇಶಿಸಿದೆ. 

11 ಸಾವಿರ ಶುಲ್ಕವನ್ನು ಪಾವತಿಸದ ಕಾರಣ್ಕಾಗಿ ಆಸ್ಪತ್ರೆ ಆಡಳಿತ ಮಂಡಳಿಯವರು ವೃದ್ಧನ ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿದ್ದಾರೆ ಎಂದು ಆ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. 

ಆಸ್ಪತ್ರೆಗೆ ದಾಖಲಾಗುವಾಗ 5 ಸಾವಿರ ರೂ. ಪಾವತಿಸಿದ್ದೇವು ಆದರೆ, ಚಿಕಿತ್ಸೆಗಾಗಿ ಇನ್ನು ಕೆಲವು ದಿನಗಳ ತೆಗೆದುಕೊಂಡಿದ್ದರಿಂದ ಹಣವಿಲ್ಲದೆ ಆ ಶುಲ್ಕವನ್ನು ಪಾವತಿ ಮಾಡಿರಲಿಲ್ಲ ಎಂದು ವಯೋವೃದ್ಧರ ಸಹೋದರಿ ಹೇಳಿದ್ದಾರೆ. ನಂತರ ಮಾನವೀಯತೆಯ ಆಧಾರದ ಮೇಲೆ ಶುಲ್ಕವನ್ನು ಆಸ್ಪತ್ರೆ ಮನ್ನಾ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. 
 

Related Stories

No stories found.

Advertisement

X
Kannada Prabha
www.kannadaprabha.com