ಸಮಯ ಉರುಳುತ್ತಿದ್ದಂತೆ ಕೊರೋನಾ ಭಯ ದೂರವಾಗಿ ಹಿಂದಿನ ಜೀವನಶೈಲಿಗೆ ಜನರು ಮರಳುತ್ತಾರೆ: ದುಶ್ಯಂತ್ ಶ್ರೀಧರ್

ಕೋವಿಡ್-19 ರೋಗ ಇಡೀ ಮನುಕುಲಕ್ಕೆ ಹೊಸ ವ್ಯವಸ್ಥೆ, ಹೊಸ ಆಲೋಚನಾ ವಿಧಾನ, ಹೊಸ ಜೀವನವನ್ನು ತೆರೆದಿಟ್ಟಿದೆ ಎನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ.
ದುಶ್ಯಂತ್ ಶ್ರೀಧರ್
ದುಶ್ಯಂತ್ ಶ್ರೀಧರ್
Updated on

ಕೋವಿಡ್-19 ರೋಗ ಇಡೀ ಮನುಕುಲಕ್ಕೆ ಹೊಸ ವ್ಯವಸ್ಥೆ, ಹೊಸ ಆಲೋಚನಾ ವಿಧಾನ, ಹೊಸ ಜೀವನವನ್ನು ತೆರೆದಿಟ್ಟಿದೆ ಎನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ.

ಕೊರೋನಾ ವೈರಸ್ ನಂತರ ಶಿಕ್ಷಣ ಪದ್ಧತಿ ಹೇಗಿರಬೇಕು, ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು ಎಂಬ ಮಾತು ಎಲ್ಲೆಡೆ ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಜ್ಞ, ವಿದ್ವಾಂಸ ದುಶ್ಯಂತ್ ಶ್ರೀಧರ್ ತಮ್ಮದೇ ವ್ಯಾಖ್ಯಾನ, ಅಭಿಪ್ರಾಯ ನೀಡುತ್ತಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ನಡೆಸುತ್ತಿರುವ ವೆಬಿನಾರ್ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪತ್ರಕರ್ತೆ ಕಾವೇರಿ ಬಮ್ಜೈ ಮತ್ತು ಶಾಸ್ತ್ರ ವಿಶ್ವವಿದ್ಯಾಲಯದ ಉಪಕುಲಪತಿ ಎಸ್ ವೈದ್ಯಸುಬ್ರಮಣ್ಯಂ ಜೊತೆ ನಡೆಸಿದ ಸಂವಾದ ಕಾರ್ಯಕ್ರಮ ಹೀಗಿದೆ:

ಆನ್ ಲೈನ್ ನಲ್ಲಿ ಮಕ್ಕಳು ಕಲಿಯುವಾಗ ಸ್ವಶಿಸ್ತು ಎಂಬ ಗುಣವನ್ನು ಮಕ್ಕಳು ಹೇಗೆ ಕಲಿಯಬೇಕು ಎಂದು ಕೇಳಿದಾಗ,ಅದು ಮಕ್ಕಳೊಳಗಿನಿಂದಲೇ ಬರಬೇಕು. ರಾಮಾಯಣದಲ್ಲಿ ಎರಡು ಪ್ರಕ್ರಿಯೆಗಳಿರುತ್ತದೆ. ಹನುಮ ದೇವ ಸ್ವಯಂ ನಿರ್ಮಿತ ವ್ಯಕ್ತಿ. ಒಂಬತ್ತು ವಿಧದ ವ್ಯಾಕರಣವನ್ನು ತಿಳಿದಿದ್ದ ಏಕೈಕ ಕೋತಿ ಅವನು. ಲಂಕಾಕ್ಕೆ ಹೋಗುವ ಮೊದಲು, ಲಂಕಾಕ್ಕೆ ಹೋಗಬಹುದೆಂದು ತಿಳಿದಿರಲಿಲ್ಲ. ಜಾಂಬವಂತ ಆತನ ಸಾಮರ್ಥ್ಯದ ಬಗ್ಗೆ ನೆನಪಿಸಿದಾಗಲೇ ಅವರು ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾಯಿತು ಮತ್ತು ಹಾರಲು ಸಾಧ್ಯವಾಯಿತು, ಹೀಗೆ ಮಕ್ಕಳಿಗೆ ಸಹ ಅದೇ ರೀತಿ.

ವಾಲ್ಮೀಕಿಯ ರಾಮಾಯಣದಲ್ಲಿ, ಆರಂಭದಲ್ಲಿ ಸೀತೆಯನ್ನು ಹುಡುಕಲಾಗದಿದ್ದಾಗ, ಅವನು ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದನು. "ಮರುಕ್ಷಣದಲ್ಲಿ ತಾನು ಆತ್ಮಹತ್ಯೆ ಮಾಡಿಕೊಂಡರೆ ಅದು ಸುಗ್ರೀವ, ರಾಮ ಮತ್ತು ಲಕ್ಷ್ಮಣರ ಮೇಲೆ ಪರಿಣಾಮ ಬೀರಬಹುದು ಎಂದು ಯೋಚಿಸುತ್ತಾನೆ. ತನ್ನನ್ನು ಪ್ರೇರೇಪಿಸಿಕೊಂಡು ಸೀತೆಯನ್ನು ಕಂಡುಹಿಡಿಯುತ್ತಾನೆ. ಅಂತೆಯೇ, ಸ್ವಯಂ-ಶಿಸ್ತು ಬಹಳ ಕಡಿಮೆ ಮಟ್ಟಿಗೆ ಒಂದು ಸಂಸ್ಥೆಯಿಂದ ಕಲಿಸಬಹುದು ಆದರೆ ಅದನ್ನು ಅರಿತುಕೊಳ್ಳುವುದು ಮತ್ತು ಅಭ್ಯಾಸ ಮಾಡುವುದು ವ್ಯಕ್ತಿಯ ಮೇಲಿದೆ ಎಂದರು.

ಕೋವಿಡ್-19ಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವ ಪ್ರಾಚೀನ ಮತ್ತು ಆಧುನಿಕ ಔಷಧಗಳ ಬಗ್ಗೆ ಮಾತನಾಡಿದ ಶ್ರೀಧರ್, “ನಾವು ಪರಿಹಾರಗಳಿಗಾಗಿ ಆಯುರ್ವೇದ ಮತ್ತು ಸಿದ್ಧ ಪ್ರಕೃತಿಯನ್ನು ಹೆಚ್ಚಾಗಿ ಅವಲಂಬಿಸಿದ್ದೇವೆ. ಅರಿಶಿನ, ಕರಿಮೆಣಸು, ಜೀರಾದಂತಹ ಪದಾರ್ಥಗಳನ್ನು ಜನರು ಹೆಚ್ಚು ಬಳಸಬಹುದು. ಜೇನುತುಪ್ಪ ತೆಗೆದುಕೊಳ್ಳಬಹುದು ಎಂದರು.

ಜನರು ಈಗ ತೋರಿಸುತ್ತಿರುವ ಸಾಮಾಜಿಕ ಅಂತರ, ಶಿಸ್ತು ಮುಂದುವರಿಸಬಹುದೇ ಎಂದು ಕಾವೇರಿಯವರು ಕೇಳಿದಾಗ ಇವೆಲ್ಲ ತಾತ್ಕಾಲಿಕವಷ್ಟೆ, ಈಗ ಭಯದಿಂದ ಜನರು ಶಿಸ್ತು, ಸಾಮಾಜಿಕ ಅಂತರ, ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದೆಂಬ ನಿಯಮಗಳನ್ನೆಲ್ಲ ಪಾಲಿಸುತ್ತಾರಷ್ಟೆ. ಈಗ ನಡೆಯುತ್ತಿರುವ ಜೀವನಶೈಲಿ ಭ್ರಮೆ ಮತ್ತು ಮೇಲ್ನೋಟ. ಈಗ ಸದ್ಯ ಜನರಿಗೆ ಬದುಕಬೇಕೆಂಬ ಹಪಾಹಪಿಯಿಂದ ಹೀಗಾಗಿದೆ, ಇದು ಜೀವನಪರ್ಯಂತ ಮುಂದುವರಿಯಬಹುದು ಎನಿಸುವುದಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com