ಉತ್ತರ ಪ್ರದೇಶ: ಪತಿಯ 2ನೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಮೊದಲ ಪತ್ನಿ

ತನ್ನ ಗಂಡನ ಎರಡನೇ ಪತ್ನಿಯನ್ನು ಮೊದಲನೆ ಹೆಂಡತಿ ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಶಬಾನಾಳನ್ನು ಪೊಲೀಸರು ಬಂಧಿಸಿದ್ದಾರೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೊರಾದಾಬಾದ್: ತನ್ನ ಗಂಡನ ಎರಡನೇ ಪತ್ನಿಯನ್ನು ಮೊದಲನೆ ಹೆಂಡತಿ ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಶಬಾನಾಳನ್ನು ಪೊಲೀಸರು ಬಂಧಿಸಿದ್ದಾರೆ.  

ಶಬನಾ ಟ್ರಾನ್ಸ್ ಪೋರ್ಟರ್ ಮೊಹಮದ್ ಜಾಕೀರ್ ಮೊದಲ ಪತ್ನಿ, ಕೆಲ ವರ್ಷಗಳ ಹಿಂದೆ ಜಾಕೀರ್ ಅಲಿಯಾ ಎಂಬಾಕೆಯನ್ನು ವಿವಾಹವಾಗಿದ್ದ, ಸದ್ಯ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು.

ಮೊದಲು ಫೋನಿನಲ್ಲಿ ಇಬ್ಬರಿಗೂ ವಾಗ್ವಾದ ನಡೆದಿದೆ ಎನ್ನಲಾಗಿದೆ, ಇಬ್ಬರ ನಡುವಿನ ಜಗಳ ನೋಡಿದ್ದ ಜಾಕೀರ್ ನಾಪತ್ತೆಯಾಗಿದ್ದ. 9ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದು, ಕೊಲೆ ನಡೆದ ಸ್ಥಳದಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸದೇ ಅಲ್ಲಿಯೇ ಕುಳಿತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಲಿಯಾ ಸಂಬಂಧಿ ಔಷಧಿ ತರಲು ಮೆಡಿಕಲ್ ಶಾಪ್ ಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ಬಂದ ಶಬನಾ ಅಲಿಯಾಳನ್ನು ನೆಲಕ್ಕೆ ತಳ್ಳಿ ಅಕೆಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾಳೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com