
ನವದೆಹಲಿ: ದೇಶಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಅತ್ತ ಕೇಂದ್ರ ವಿದೇಶಿ ವ್ಯಾಪಾರ ನಿರ್ದೇಶನಾಲಯ ದೇಶದಲ್ಲಿ ತಯಾರಾಗುವ ಪ್ರಮುಖ ಪರೀಕ್ಷಾ ಕಿಟ್ ಗಳ ರಫ್ತಿಗೆ ತಾತ್ಕಾಲಿಕ ನಿಷೇಧ ಹೇರಿದೆ.
ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ದೇಶದಲ್ಲಿ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 9,985ಸೋಂಕು ಪ್ರಕರಣ ದಾಖಲಾಗಿದೆ.
ಹೀಗಾಗಿ ದೇಶದಲ್ಲಿನ ಸೋಂಕು ಪ್ರಕರಣಗಳ ನಿರ್ವಹಣಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಪ್ರಯೋಗಾರ್ಥ ಕೇಂದ್ರ ವಿದೇಶಿ ವ್ಯಾಪಾರ ನಿರ್ದೇಶನಾಲಯ ದೇಶದಲ್ಲಿ ತಯಾರಾಗುವ ಪ್ರಮುಖ ಪರೀಕ್ಷಾ ಕಿಟ್ ಗಳ ರಫ್ತಿಗೆ ತಾತ್ಕಾಲಿಕ ನಿಷೇಧ ಹೇರಿದೆ.
ವಿದೇಶಿ ವ್ಯಾಪಾರ ನಿರ್ದೇಶನಾಲಯ ವಿಟಿಎಂ ಕಿಟ್ ಗಳು, ಆರ್ ಎನ್ ಎ ಎಕ್ಸ್ ಟ್ರಾಕ್ಷನ್ ಕಿಟ್ ಗಳು, ಆರ್ ಡಿ ಪಿಸಿಆರ್ ಕಿಟ್ ಗಳು ಮತ್ತು ರಿಗೆಂಟ್ ಗಳು, 15ML ಫಾಲ್ಕನ್ ಟ್ಯೂಬ್ ಗಳು, ಸ್ವಾಬ್ ಟೆಸ್ಚ್ ಸ್ಟಿರೈಲ್ ಫೈಬರ್ ಸ್ಟ್ರಾಪ್ಸ್ ಗಳು, ಸಿಲಿಕಾನ್ ಕಾಲಂಗಳು ಸೇರಿದಂತೆ ಹಲವು ಬಗೆಯ ಪರೀಕ್ಷಾ ಕಿಟ್ ಗಳ ರಫ್ತಿಗೆ DGFT ನಿಷೇಧ ಹೇರಿದೆ.
Advertisement