ಇದು 1962ರ ಭಾರತವಲ್ಲ: ಗಡಿಯಲ್ಲಿ ಚೀನಾ ತಂಟೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು!

ಚೀನಾ ಕಾಲು ಕೆರೆದು ಬಂದರೆ ನೋಡಿ ಸುಮ್ಮನಾಗಲು ಇದು 1962ರ ಭಾರತವಲ್ಲ, ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೈರ್ಯಶಾಲಿ ನಾಯಕರ ಸಾರಥ್ಯವಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ನವದೆಹಲಿ: ಚೀನಾ ಕಾಲು ಕೆರೆದು ಬಂದರೆ ನೋಡಿ ಸುಮ್ಮನಾಗಲು ಇದು 1962ರ ಭಾರತವಲ್ಲ, ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೈರ್ಯಶಾಲಿ ನಾಯಕರ ಸಾರಥ್ಯವಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಅತ್ತ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ರಾಹುಲ್ ಗಾಂಧಿ ಅವರ ಮಾಹಿತಿ ತಿಳಿದು ಮಾತನಾಡಿದರೆ ಒಳಿತು.  ಚೀನಾ ಕಾಲು ಕೆರೆದು ಬಂದರೆ ನೋಡಿ ಸುಮ್ಮನಾಗಲು ಇದು 1962ರ ಭಾರತವಲ್ಲ, ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೈರ್ಯಶಾಲಿ ನಾಯಕರ ಸಾರಥ್ಯವಿದೆ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ವರ್ಚುವಲ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ಭಾರತ ಸ್ವಾವಲಂಬಿಯಾಗುವತ್ತ ಮುನ್ನುಗ್ಗುತ್ತಿದೆ. ಭದ್ರತಾ ವಿಚಾರ ಬಂದಾಗ ಭಾರತ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಸರ್ಜಿಕಲ್ ಸ್ಟ್ರೈಕ್, ವಾಯುದಾಳಿ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಈಗ ಚೀನಾ ಕೂಡ ಭಾರತದ ವಿರುದ್ಧ ಕಾಲು ಕೆರೆಯುತ್ತಿದೆ. ಚೀನಾ ಕಾಲು ಕೆರೆದು ಬಂದರೆ ನೋಡಿ ಸುಮ್ಮನಾಗಲು ಇದು 1962ರ ಭಾರತವಲ್ಲ, ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೈರ್ಯಶಾಲಿ ನಾಯಕರ ಸಾರಥ್ಯವಿದೆ. ನಾನು ಈ ಮೂಲಕ ಒಂದು ಮಾತು ಸ್ಪಷ್ಟ ಪಡಿಸುತ್ತೇನೆ. ಭಾರತದ ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಮೊದಲ ಆದ್ಯತೆ ನೀಡುತ್ತದೆ. ಭಾರತ ಈಗ 2020ರಲ್ಲಿದೆ ಎಂಬುದನ್ನು ಚೀನಾ ಮರೆಯಬಾರದು. ಇದು ಕಾಂಗ್ರೆಸ್ ನಾಯಕರ ಭಾರತವಲ್ಲ ಎಂದು ಹೇಳಿದರು.  

1962ರಲ್ಲಿ ಭಾರತ ಚೀನಾ ವಿರುದ್ಧ ಸೋತಾಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್ ನಾಯಕರಿಗೆ ಯಾವ ವಿಚಾರವನ್ನು ಹೇಗೆ ಮಾತನಾಡಬೇಕು ಎಂಬುದೇ ತಿಳಿದಿಲ್ಲ. ರಾಷ್ಟ್ರೀಯ ಭದ್ರತಾ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com