ಮಧ್ಯಪ್ರದೇಶ: ಕೊರೋನಾಗೆ 'ಚುಂಬನ ಚಿಕಿತ್ಸೆ' ನೀಡುತ್ತಿದ್ದ ಬಾಬಾ 24 ಮಂದಿಗೆ ರೋಗ ತಗುಲಿಸಿ ತಾನೂ ಬಲಿಯಾದ!

 ಕೋವಿಡ್ -19 ಸೋಂಕಿತ ಲಕ್ಷಾಂತರ ಜನ ಜಗತ್ತಿನಾದ್ಯಂತ ಮಹಾಮಾರಿಗೆ ತುತ್ತಾಗಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗದ ತಡೆಗಾಗಿ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು ವಿಜ್ಞಾನಿಗಳು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ರೋಗವನ್ನು ಒಂದೇ ಒಂದು "ಕಿಸ್" ಮೂಲಕ ಗುಣ ಮಾಡುವುದಾಗಿ ಹೇಳುವ ಬಾಬಾ ಓರ್ವ
ಕಿಸ್ಸಿಂಗ್ ಬಾಬಾ
ಕಿಸ್ಸಿಂಗ್ ಬಾಬಾ

ಭೋಪಾಲ್: ಕೋವಿಡ್ -19 ಸೋಂಕಿತ ಲಕ್ಷಾಂತರ ಜನ ಜಗತ್ತಿನಾದ್ಯಂತ ಮಹಾಮಾರಿಗೆ ತುತ್ತಾಗಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗದ ತಡೆಗಾಗಿ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು ವಿಜ್ಞಾನಿಗಳು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ರೋಗವನ್ನು ಒಂದೇ ಒಂದು "ಕಿಸ್" ಮೂಲಕ ಗುಣ ಮಾಡುವುದಾಗಿ ಹೇಳುವ ಬಾಬಾ ಓರ್ವ 24 ಜನರಿಗೆ ಕೊರೋನಾ ತಗುಲಿಸಿದ್ದಲ್ಲದೆ ತಾನೇ ಕೋವಿಡ್ ಗೆ ಬಲಿಯಾಗಿದ್ದಾನೆ. 

 ಕಿಸ್ಸಿಂಗ್ ಬಾಬಾ ಅಲಿಯಾಸ್ ಅಸ್ಲಮ್ ಬಾಬಾ ಕೊರೋನಾವೈರಸ್ ಕಾರಣ ಮೃತಪಟ್ಟಿದ್ದಾನೆ. ಮಧ್ಯಪ್ರದೇಶದ ಈ ಬಾಬಾ ಸೋಂಕಿತ ಜನರ ಕೈ ಚುಂಬಿಸುವ ಮೂಲಕ ಗುಣಪಡಿಸುವುದಾಗಿ ಹೇಳುತ್ತಿದ್ದ. ಆದರೆ ಜೂನ್ 4 ರಂದು 'ಬಾಬಾ' ಸ್ವತಃ ಮಹಾಮಾರಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಅವನ ಮರಣದ ನಂತರ,  ಅವನೊಂದಿಗೆ ಸಂಪರ್ಕಕ್ಕೆ ಬಂದ ಕನಿಷ್ಠ 24 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಮಧ್ಯಪ್ರದೇಶದ ರತ್ಲಾಂ ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಈ ಬಾಬಾ ಬಳಿ ಅನೇಕರು ಕೊರೋನಾ "ಕಿಸ್ಸಿಂಗ್ ಚಿಕಿತ್ಸೆ"ಗಾಗಿ ಬಂದಿದ್ದರು.'ಬಾಬಾ' ಸಂಪರ್ಕದಲ್ಲಿದ್ದ 24 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಡಾ.ಪ್ರಮೋದ್ ಪ್ರಜಾಪತಿ ಹೇಳಿದರು:

ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಕೊರೋನಾ ಜಾಗೃತಿ ಈ ಪ್ರಮಾಣದಲ್ಲಿದ್ದರೂ ಮೂಢನಂಬಿಕೆಗಳಿಗೆ ಬಲಿಯಾಗಿರುವುದು ಬೇಸರದ ಸಂಗತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com