ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಸಂಪೂರ್ಣ ಸಡಿಲಗೊಳಿಸಿದ್ದರೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ರಾತ್ರಿ ಸಮಯದಲ್ಲೂ ಹೆದ್ದಾರಿಗಳಲ್ಲಿ ಪ್ರಯಾಣಿಕ ಬಸ್ ಗಳು ಮತ್ತು ಗೂಡ್ಸ್ ಲಾರಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ರಾತ್ರಿಯ ಸಮಯದಲ್ಲಿ ವ್ಯಕ್ತಿಗಳ ಚಲನೆಯನ್ನು ನಿರ್ಬಂಧಿಸುವ ಉದ್ದೇಶವು ಮುಖ್ಯವಾಗಿ ಜನ ಸಂದಣಿಯನ್ನು ತಡೆಗಟ್ಟುವುದು ಮತ್ತು ಸಾಮಾಜಿಕ ಅಂತರ ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ, ಆದರೆ ಪೂರೈಕೆ ಚೈನ್ ಮತ್ತು ಜಾರಿ ವ್ಯವಸ್ಥೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ.
"ಸರಕುಗಳನ್ನು ಲೋಡ್ / ಅನ್ ಲೋಡ್ ಮಾಡುವುದಕ್ಕೆ(ಸರಬರಾಜು ಚೈನ್ ಮತ್ತು ಲಾಜಿಸ್ಟಿಕ್ಸ್‌ನ ಭಾಗವಾಗಿ) ಈ ನಿರ್ಬಂಧವು ಅನ್ವಯಿಸುವುದಿಲ್ಲ, ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಬಹುದು ಎಂದು ಭಲ್ಲಾ ತಿಳಿಸಿದ್ದಾರೆ.
Advertisement