ಕೊವಿಡ್-19 ಪರೀಕ್ಷೆ ದರ ಅರ್ಧದಷ್ಟು ಕಡಿಮೆ ಮಾಡಿದ ಮಹಾ ಸರ್ಕಾರ

ಖಾಸಗಿ ಲ್ಯಾಬ್ ನಲ್ಲಿ ಕೊವಿಡ್-19 ಸ್ವ್ಯಾಬ್ ಪರೀಕ್ಷೆಯ ದರವನ್ನು ಅರ್ಧದಷ್ಟು ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ತೆಗೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಖಾಸಗಿ ಲ್ಯಾಬ್ ನಲ್ಲಿ ಕೊವಿಡ್-19 ಸ್ವ್ಯಾಬ್ ಪರೀಕ್ಷೆಯ ದರವನ್ನು ಅರ್ಧದಷ್ಟು ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ತೆಗೆದುಕೊಂಡಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಕೊವಿಡ್-19 ಪರೀಕ್ಷೆಗೆ ತಗುಲುವ ವೆಚ್ಚದ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿತ್ತು. ಈಗ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಖಾಸಗಿ ಲ್ಯಾಬ್ ನಲ್ಲಿ ಕೊವಿಡ್-19 ಪರೀಕ್ಷೆಗೆ ಇದ್ದ4500 ರೂಪಾಯಿ 2200 ರೂಪಾಯಿಗೆ ಇಳಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಈ ನಿರ್ಧಾರದ ಜನ ಸಾಮಾನ್ಯರು ಕಡಿಮೆ ಬೆಲೆಯಲ್ಲಿ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಒಟ್ಟು 95 ಪ್ರಯೋಗಾಲಯಗಳು ಕೊವಿಡ್-19 ಪರೀಕ್ಷೆಗಳನ್ನು ನಡೆಸುತ್ತಿವೆ, ಅವುಗಳಲ್ಲಿ 42 ಪ್ರಯೋಗಾಲಯಗಳು ಖಾಸಗಿಯಾಗಿದ್ದರೆ, ಉಳಿದವು ಸರ್ಕಾರಿ ಪ್ರಯೋಗಾಲಯಗಳಾಗಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com