ಬೆಂಗಳೂರು ಸೇರಿ 12 ಪ್ರಾದೇಶಿಕ ಕಚೇರಿ ಮುಚ್ಚಲು ‘ರಾಯಲ್ ಎನ್ ಫೀಲ್ಡ್’ ನಿರ್ಧಾರ

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ಫೀಲ್ಡ್ ತನ್ನ ವೆಚ್ಚತಗ್ಗಿಸಿಕೊಳ್ಳವ ಭಾಗವಾಗಿ 12 ಪ್ರಾಂತೀಯ ಕಚೇರಿಗಳನ್ನು ಮುಚ್ಚಲು ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ಫೀಲ್ಡ್ ತನ್ನ ವೆಚ್ಚತಗ್ಗಿಸಿಕೊಳ್ಳವ ಭಾಗವಾಗಿ 12 ಪ್ರಾಂತೀಯ ಕಚೇರಿಗಳನ್ನು ಮುಚ್ಚಲು ತೀರ್ಮಾನಿಸಿದೆ.

ಈ ಸಂಬಂಧ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು, ಗುರುಗ್ರಾಮ್, ಚೆನ್ನೈ, ಬೆಂಗಳೂರು, ಮುಂಬೈ, ಜಾರ್ಖಂಡ್, ಹೈದರಾಬಾದ್, ಭುವನೇಶ್ವರದ ಜೊತೆಗೆ ಇತರ ಪ್ರಾದೇಶಿಕ ಕಚೇರಿಗಳನ್ನು ತಕ್ಷಣವೇ ಮುಚ್ಚುವಂತೆ ಸೂಚಿಸಿದೆ. ಕೆಲವು ಪ್ರಾದೇಶಿಕ ಕಾರ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ, ವರ್ಕ್ ಪ್ರಂ ಹೋಂ ಮುಂದುವರಿಯಲಿದೆ ಎಂದು ಕಂಪನಿ ಮುಖ್ಯ ವಾಣಿಜ್ಯ ಅಧಿಕಾರಿ ಲಲಿತ್ ಮಾಲಿಕ್ ತಿಳಿಸಿದ್ದಾರೆ. ಇದರಿಂದ ಉದ್ಯೋಗಿಗಳ ಪ್ರಯಾಣ ಸಮಯ ಗಣನೀಯವಾಗಿ ತಗ್ಗಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com