ಮುಂಬಯಿ: ಚೀನಾ ಅಥವಾ ಪಾಕಿಸ್ತಾನದ ಭೂಮಿಯಲ್ಲಿ ಆಸಕ್ತಿಯಿಲ್ಲ, ದೇಶವು ಶಾಂತಿ ಮತ್ತು ಸೌಹಾರ್ದತೆಯನ್ನು ಮಾತ್ರ ಬಯಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ನಡೆದ ಬಿಜೆಪಿಯ ವರ್ಚುವಲ್ 'ಜನ ಸಂವದ್' ರ್ಯಾಲಿಯಲ್ಲಿ ಇತ್ತೀಚಿಗಿನ ಭಾರತ ಮತ್ತು ಚೀನಾ ನಡುವೆ ನಡೆದ ಲಡಾಖ್ ಗಡಿ ವಿವಾದ ಹಿನ್ನಲೆಯಲ್ಲಿ ಗಡ್ಕರಿ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ತನ್ನ ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಕೆಲಸದ ಕುರಿತು ಮಾತನಾಡಿದ ಗಡ್ಕರಿ, ಆಂತರಿಕ ಮತ್ತು ಬಾಹ್ಯ ಭದ್ರತೆಯ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ ಶಾಂತಿಯನ್ನು ತರುವುದು ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
ಇದು ಮಾವೋವಾದಿ ಸಮಸ್ಯೆಯನ್ನು ಬಹುತೇಕ ಗೆಲ್ಲುವ ಬಗ್ಗೆಯಾಗಲಿ ಅಥವಾ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ದೇಶವನ್ನು ಭದ್ರಪಡಿಸುವುದಾಗಲಿ. ನಮಗೆ ಶಾಂತಿ ಬೇಕು, ಹಿಂಸಾಚಾರವಲ್ಲ' ಎಂದು ಅವರು ವೀಡಿಯೊ-ಕಾನ್ಫರೆನ್ಸ್ ಮೂಲಕ ಹೇಳಿದರು.
Advertisement