ಚೀನೀ ಸೈನಿಕರಿಂದ ಭಾರತೀಯ ಯೋಧರ ಹತ್ಯೆ; ಆಘಾತ ವ್ಯಕ್ತಪಡಿಸಿದ ಕಾಂಗ್ರೆಸ್

ಲಡಾಖ್ ಗಡಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಚೀನೀ ಸೈನಿಕರು ಭಾರತೀಯ ಯೋಧರನ್ನು ಕೊಂದಿರುವ ಘಟನೆ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಆಘಾತ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಲಡಾಖ್ ಗಡಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಚೀನೀ ಸೈನಿಕರು ಭಾರತೀಯ ಯೋಧರನ್ನು ಕೊಂದಿರುವ ಘಟನೆ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಆಘಾತ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಚೀನೀ ಸೈನಿಕರ ನಡೆ ಆಘಾತಕಾರಿ ಮತ್ತು ಸಹಿಸಲಾಗದ್ದು ಎಂದು ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಲಡಾಖ್ ಗಡಿಯಲ್ಲಿನ ಘಟನೆ ನಿಜಕ್ಕೂ ಆಘಾತಕಾರಿ ಮತ್ತು ಸಹಿಸಲಸಾಧ್ಯವಾದದ್ದು. ಈ ಬಗ್ಗೆ ರಕ್ಷಣಾ ಮಂತ್ರಿಗಳೇ ಮಾಹಿತಿ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಪೂರ್ವ ಲಡಾಖ್ ನ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರು ಮತ್ತು ಚೀನೀ ಸೈನಿಕರ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಏರ್ಪಟ್ಟಿದ್ದು, ಈ ವೇಳೆ ಉಭಯ ಬಣದ ಸೈನಿಕರ ನಡುವೆ ವಾಕ್ಸಮರ ಏರ್ಪಟ್ಟಿದೆ. ಈ ವೇಳೆ ನೋಡ ನೋಡುತ್ತಲೇ ಪರಿಸ್ಥಿತಿ ಕೈ ಮೀರಿದ್ದು ಹೊಡೆದಾಟ ಆರಂಭವಾಗಿ ಚೀನೀ ಸೈನಿಕರ ಭಾರತೀಯ ಸೇನೆಯ ಓರ್ವ ಅಧಿಕಾರಿ ಮತ್ತು ಇಬ್ಬರು ಸೈನಿಕರನ್ನು ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com