ಲಡಾಖ್ ಲಡಾಯಿ: ಸತತ 3 ನೇ ದಿನ ಭಾರತ-ಚೀನಾ ಸೇನಾ ಮಾತುಕತೆ

ಈಶಾನ್ಯ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. 
ಭಾರತ-ಚೀನಾ ಸೇನಾ ಮಾತುಕತೆ (ಸಂಗ್ರಹ ಚಿತ್ರ)
ಭಾರತ-ಚೀನಾ ಸೇನಾ ಮಾತುಕತೆ (ಸಂಗ್ರಹ ಚಿತ್ರ)

ಲಡಾಖ್: ಈಶಾನ್ಯ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. ಉಭಯ ಸೇನೆಯಲ್ಲಿರುವ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳು ಸಭೆ ನಡೆಸಿದ್ದು ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದರ ಬಗ್ಗೆ ಚರ್ಚಿಸಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನೆ ನಡುವೆ ಘರ್ಷಣೆ ಉಂಟಾಗಿ ಜೂ.15 ರಂದು ಭಾರತದ ಕರ್ನಲ್ ಹಾಗೂ 19 ಯೋಧರು ಹುತಾತ್ಮರಾಗಿದ್ದರು. 18 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

ಜೂ.16 (ಮಂಗಳವಾರ) ಜೂ.-17 (ಬುಧವಾರ)ವೂ ಭಾರತ-ಚೀನಾ ನಡುವೆ ಮಾತುಕತೆ ನಡೆದಿತ್ತು. ಬುಧವಾರದಂದು ನಡೆದ ಚರ್ಚೆಯಲ್ಲಿ ಗಾಲ್ವಾನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿತ್ತು. ನೆನ್ನೆ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ "ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ಪ್ರತಿ ಉತ್ತರ ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com