ಸಾಂದರ್ಭಿಕ ಚಿತ್ರ
ದೇಶ
ಕೊರೋನಾ ಪರೀಕ್ಷೆಗೆ 2,200 ರು. ನಿಗದಿ ಪಡಿಸಿದ ರಾಜಸ್ತಾನ ಸರ್ಕಾರ
ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೋನಾ ಪರೀಕ್ಷಾ ಶುಲ್ಕವನ್ನು 2,200 ರು.ನಿರ್ಧರಿಸಿ ರಾಜಸ್ತಾನ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಖಾಸಗಿ ಪ್ರಯೋಗಾಲಾಯಗಳಲ್ಲಿ 3,500 ರಿಂದ 4,500 ರೂ.ದರ ವಿಧಿಸಲಾಗುತ್ತಿತ್ತು.
ಜೈಪುರ: ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೋನಾ ಪರೀಕ್ಷಾ ಶುಲ್ಕವನ್ನು 2,200 ರು.ನಿರ್ಧರಿಸಿ ರಾಜಸ್ತಾನ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಖಾಸಗಿ ಪ್ರಯೋಗಾಲಾಯಗಳಲ್ಲಿ 3,500 ರಿಂದ 4,500 ರೂ.ದರ ವಿಧಿಸಲಾಗುತ್ತಿತ್ತು.
ಶುಕ್ರವಾರ ರಾತ್ರಿ ಸಭೆ ನಡೆಸಿದ್ದ ಸಿಎಂ ಅಶೋಕ್ ಗೆಹ್ಲೋಟ್ ರಾಜ್ಯಾದ್ಯಂತ ಕೊರೋನಾ ವಿರುದ್ಧ ಹೋರಾಡಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಕೊರೋನಾ ಪರೀಕ್ಷೆ ದರ ಕೂಡ ನಿಗದಿ ಮಾಡಿದ್ದಾರೆ.
ಪ್ರತಿ ಹಾಸಿಗೆಗೆ ಗರಿಷ್ಠ ಶುಲ್ಕ 2,000 ರೂ ಮತ್ತು ವೆಂಟಿಲೇಟರ್ ಇರುವ ಹಾಸಿಗೆ 4,000 ರೂ. ನಿಗದಿ ಪಡಿಸುವಂತೆ ಸೂಚಿಸಿದ್ದಾರೆ, ಯಾವುದೇ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ಪಡೆಯುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆ ಲ್ಯಾಬ್ ಗಳು ಹೆಚ್ಚಿನ ಹಣ ಪಡೆಯದಂತೆ ಆರೋಗ್ಯ ಇಲಾಖೆ ನಿಗಾ ವಹಿಸಬೇಕೆಂದು ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ