ಲಡಾಖ್: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಯೋಧರ ನಡುವಿನ ಸಂಘರ್ಷ ನಡೆದ ಒಂದು ವಾರದ ಬಳಿಕ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗತೊಡಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದೆ. ಭಾರತೀಯ ಹಾಗೂ ಚೀನಾದ ಸೇನಾ ಸಿಬ್ಬಂದಿಗಳು ಹಾಗೂ ಭಾರತೀಯ ಯೋಧರ ನಡುವೆ ವಾಗ್ವಾದ ನಡೆದು ಕೈ-ಕೈ ಮಿಲಾಯಿಸಿ ಬಡಿದಾಟ ನಡೆದಿರುವುದನ್ನು ಕಾಣಬಹುದಾಗಿದೆ.
ಭಾರತೀಯ ಯೋಧರು ಹಿಂದೆ ಹೋಗಿ, ಹೊಡೆದಾಡಬೇಡಿ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿರುವ ಈ ವಿಡಿಯೋ ಅಧೃತತೆ ಬಗ್ಗೆ ಈ ವರೆಗೂ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಇದು ಯಾವ ದಿನಾಂಕದ್ದು, ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದಕ್ಕೂ ಮಾಹಿತಿ ಲಭ್ಯವಾಗಿಲ್ಲ.
Advertisement