ಗುಜರಾತ್: 'ಕ್ಯಾಚ್ ಮಿ ಇಫ್ ಯೂ ಕ್ಯಾನ್' ಚಿತ್ರದಿಂದ ಪ್ರಭಾವಿತನಾಗಿ 50 ಲಕ್ಷ ವಂಚನೆ; 23 ವರ್ಷದ ಯುವಕನ ಬಂಧನ

ಕಳೆದ ನಾಲ್ಕು ವರ್ಷಗಳಲ್ಲಿ 15 ವಿವಿಧ ಸಂಸ್ಥೆಗಳಿಗೆ ಫೋರ್ಜರಿ ಮೂಲಕ ಕನಿಷ್ಠ 50 ಲಕ್ಷ ರೂ.ಗಳ ಮೋಸ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಗುಜರಾತ್‌ ಪೊಲೀಸರು ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಹಮದಾಬಾದ್: ಕಳೆದ ನಾಲ್ಕು ವರ್ಷಗಳಲ್ಲಿ 15 ವಿವಿಧ ಸಂಸ್ಥೆಗಳಿಗೆ ಫೋರ್ಜರಿ ಮೂಲಕ ಕನಿಷ್ಠ 50 ಲಕ್ಷ ರೂ.ಗಳ ಮೋಸ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಗುಜರಾತ್‌ ಪೊಲೀಸರು ಬಂಧಿಸಲಾಗಿದೆ.

23 ವರ್ಷದ ಜೇ ಸೋನಿ ಎಂಬಾತ ಹಾಲಿವುಡ್ ಚಲನಚಿತ್ರ 'ಕ್ಯಾಚ್ ಮಿ ಇಫ್ ಯು ಕ್ಯಾನ್' ನಿಂದ ಪ್ರೇರಣೆ ಪಡೆದು ಅಪರಾಧಗಳನ್ನು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಿ ವಿರುದ್ಧ ಅಹ್ಮದಾಬಾದ್‌ನಲ್ಲಿ ಎರಡು, ವಡೋದರಾದಲ್ಲಿ ಎರಡು ಮತ್ತು ರಾಜಸ್ಥಾನದ ಜೈಪುರದಲ್ಲಿ ಆರು ವಂಚನೆ ಮತ್ತು ಫೋರ್ಜರಿ ಪ್ರಕರಣಗಳು ದಾಖಲಾಗಿವೆ.

2016ರ ನಂತರ ಇದೇ ಮೊದಲ ಬಾರಿಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿಗಳ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾನೆ. ಆತ 50 ಲಕ್ಷ ರೂ.ಗಳ ವಂಚನೆಯಲ್ಲಿ ಭಾಗಿಯಾಗಿದ್ದಾನೆ ಎಂದು ಅಪರಾಧ ವಿಭಾಗ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com