’ಸಾಮಾಜಿಕ ಜಲಾತಾಣ, ನಾಯಕರ ದ್ವೇಷ ಭಾಷಣ, ಪಾಕ್, ಬಾಂಗ್ಲಾ ನುಸುಳುಕೋರರಿಂದ ದೆಹಲಿಯಲ್ಲಿ ಕೋಮುಗಲಭೆ’
ದೇಶ
’ಸಾಮಾಜಿಕ ಜಲಾತಾಣ, ನಾಯಕರ ದ್ವೇಷ ಭಾಷಣ, ಪಾಕ್, ಬಾಂಗ್ಲಾ ನುಸುಳುಕೋರರಿಂದ ದೆಹಲಿಯಲ್ಲಿ ಕೋಮುಗಲಭೆ’
ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಪ್ರಚಾರ ದೆಹಲಿಯಲ್ಲಿ ಕೋಮುಗಲಭೆ ಸಂಭವಿಸಲು ಕಾರಣ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಪ್ರಚಾರ ದೆಹಲಿಯಲ್ಲಿ ಕೋಮುಗಲಭೆ ಸಂಭವಿಸಲು ಕಾರಣ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಹೈದಾರಾಬಾದ್ ನಲ್ಲಿ ನಡೆದ ಐಎಸ್ ಬಿ ಪಾಲಿಸಿ ಕಾನ್ಕ್ಲೇವ್ ನ್ನು ಉದ್ಘಾಟಿಸಿ ಮಾತನಾಡಿರುವ ಕಿಶನ್ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಪ್ರಚಾರದಷ್ಟೇ ಅಲ್ಲದೇ ರಾಜಕಾರಣಿಗಳ ದ್ವೇಷ ಭಾಷಣವೂ ಗಲಭೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಗಲಭೆಯಲ್ಲಿ ಪೊಲೀಸ್ ಅಧಿಕಾರಿಗಳ ಭೀಕರ ಹತ್ಯೆ ದುಃಖಕರ ಎಂದು ಹೇಳಿರುವ ಅವರು, ಪಾಕಿಸ್ತಾನ, ಬಾಂಗ್ಲಾದೇಶದ ನುಸುಳುಕೋರರು ಭಾರತದಲ್ಲಿ ವಿನಾಶ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡೀ ವಿಶ್ವ ಭಾರತದತ್ತ ನೋಡುತ್ತಿದೆ, ಕೈಗಾರಿಕೆ ಮತ್ತು ತಾಂತ್ರಿಕ ವಿಷಯದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಯುವಜನತೆ ಹೊಸ ಆಲೋಚನೆಗಳೊಂದಿಗೆ ಬನ್ನಿ ಎಂದು ಕಿಶನ್ ರೆಡ್ಡಿ ಕರೆ ನೀಡಿದ್ದಾರೆ.