ಬಿಎಸ್ಎಫ್ ಆಯ್ತು, ಈಗ ಸಿಆರ್`ಪಿಎಫ್: ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ನಿವೃತ್ತ ಯೋಧನಿ​ಗೆ 11 ಲಕ್ಷ ರೂ ನೆರವು!

ಭಾರತೀಯ ಸೇನೆಯ ಯೋಧ ಎಂದೂ ಏಕಾಂಗಿಯಲ್ಲ ಎಂಬುದನ್ನು ಭಾರತೀಯ ಸೇನೆ ಮತ್ತೊಮ್ಮೆ ಸಾಬೀತು ಪಡಿಸಿದ್ದು, ಕಳೆದ ವಾರ ಸಂಭವಿಸಿದ ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡಿದ್ದ ನಿವೃತ್ತ ಯೋಧ ಅಲಿಶ್ ಮೊಹಮದ್ ಗೆ ಸಿಆರ್ ಪಿಎಫ್ 11 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.
ಯೋಧ ಅಲಿಶ್ ಗೆ ಚೆಕ್ ವಿತರಣೆ
ಯೋಧ ಅಲಿಶ್ ಗೆ ಚೆಕ್ ವಿತರಣೆ

ನವದೆಹಲಿ: ಭಾರತೀಯ ಸೇನೆಯ ಯೋಧ ಎಂದೂ ಏಕಾಂಗಿಯಲ್ಲ ಎಂಬುದನ್ನು ಭಾರತೀಯ ಸೇನೆ ಮತ್ತೊಮ್ಮೆ ಸಾಬೀತು ಪಡಿಸಿದ್ದು, ಕಳೆದ ವಾರ ಸಂಭವಿಸಿದ ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡಿದ್ದ ನಿವೃತ್ತ ಯೋಧ ಅಲಿಶ್ ಮೊಹಮದ್ ಗೆ ಸಿಆರ್ ಪಿಎಫ್ 11 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಡೈರೆಕ್ಟರ್ ಜನರಲ್ ಡಾ.ಎಪಿ ಮಹೇಶ್ವರಿ ಅವರು ಬುಧವಾರ ದೆಹಲಿಯ ಸಿಆರ್ ಪಿಎಫ್ ಪ್ರಧಾನ ಕಚೇರಿಯಲ್ಲಿ ನಿವೃತ್ತ ಸಿಆರ್ ಪಿಎಫ್ ಯೋಧ ಅಲಿಶ್ ಮೊಹಮದ್ ಗೆ 11 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದ್ದಾರೆ. 

ಈ ವೇಳೆ ಮಾತನಾಡಿದ ಡಾ.ಎಪಿ ಮಹೇಶ್ವರಿ ಅವರು, ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬ ನಮ್ಮ ಕುಟುಂಬವಿದ್ದಂತೆ. ಕಷ್ಟಬಂದಾಗ ಪರಸ್ಪರ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಕಳೆದ ವಾರ ಸಂಭವಿಸಿದ್ದ ದೆಹಲಿ ಹಿಂಸಾಚಾರದ ವೇಳೆ ಅಲಿಶ್ ಮೊಹಮದ್ ಅವರ ಭಾಗಿರಥಿ ವಿಹಾರ್ ನಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಇಡೀ ಮನೆಗೆ ಬೆಂಕಿ ಇಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com